ಪಾಕ್ ತಂಡಕ್ಕೆ ಕಮ್ರಾನ್,ಶಹಝಾದ್ ವಾಪಸ್
ವಿಂಡೀಸ್ ವಿರುದ್ಧ ಟ್ವೆಂಟಿ-20, ಏಕದಿನ ಸರಣಿ

ಕರಾಚಿ, ಮಾ.15: ವೆಸ್ಟ್‌ಇಂಡೀಸ್ ವಿರುದ್ಧದ ಟ್ವೆಂಟಿ-20 ಹಾಗೂ ಏಕದಿನ ಸರಣಿಗೆ ಹಿರಿಯ ಆಟಗಾರ ಕಮ್ರಾನ್ ಅಕ್ಮಲ್ ಹಾಗೂ ಅಹ್ಮದ್ ಶಹಝಾದ್ ಪಾಕ್ ತಂಡಕ್ಕೆ ವಾಪಸಾಗಿದ್ದಾರೆ.
35ರ ಹರೆಯದ ಅಕ್ಮಲ್ 4 ವರ್ಷಗಳ ಹಿಂದೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ವಿರುದ್ಧ ಕೊನೆಯ ಏಕದಿನ ಪಂದ್ಯ ಆಡಿದ್ದರು. 2014ರಲ್ಲಿ ವಿಂಡೀಸ್ ವಿರುದ್ಧ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಕೊನೆಯ ಟ್ವೆಂಟಿ-20 ಪಂದ್ಯ ಆಡಿದ್ದರು. ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ 353 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡಿರುವ ಅಕ್ಮಲ್ ಪಾಕ್ ತಂಡಕ್ಕೆ ವಾಪಸಾಗಿದ್ದಾರೆ. ಒಂದು ವರ್ಷದಿಂದ ಪಾಕ್ ತಂಡದಿಂದ ದೂರ ಉಳಿದಿದ್ದ ಆರಂಭಿಕ ಬ್ಯಾಟ್ಸ್‌ಮನ್ ಶಹಝಾದ್ ದೇಶೀಯ ಕ್ರಿಕೆಟ್ ಹಾಗೂ ಪಿಎಸ್‌ಎಲ್‌ನಲ್ಲಿ ನೀಡಿರುವ ಸ್ಥಿರ ಪ್ರದರ್ಶನವನ್ನು ಆಧರಿಸಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಪಿಎಸ್‌ಎಲ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿರುವ ಯುವ ಆಲ್‌ರೌಂಡರ್ ಶಾದಾಬ್ ಖಾನ್, ಉಸ್ಮಾನ್ ಖಾನ್ ಟ್ವೆಂಟಿ-20 ತಂಡದಲ್ಲ್ಲಿದ್ದಾರೆ. 4 ಪಂದ್ಯಗಳ ಟ್ವೆಂಟಿ-20 ಸರಣಿ ಮಾ.26 ರಿಂದ ಬಾರ್ಬಡಾಸ್‌ನಲ್ಲಿ ಆರಂಭವಾಗಲಿದೆ. 3 ಪಂದ್ಯಗಳ ಏಕದಿನ ಸರಣಿ ಎ.7 ರಿಂದ 11ರ ತನಕ ಗಯಾನದಲ್ಲಿ ನಡೆಯಲಿದೆ.





