Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಇದು ಚಡ್ಡಿಗಳ ಕಾಲೇಜು!

ಇದು ಚಡ್ಡಿಗಳ ಕಾಲೇಜು!

ಧಾರಾವಾಹಿ-16

ಬಿ.ಎಂ.ಬಶೀರ್ಬಿ.ಎಂ.ಬಶೀರ್16 March 2017 12:38 AM IST
share
ಇದು ಚಡ್ಡಿಗಳ ಕಾಲೇಜು!

‘‘ಅದೆಂತ ಕಿಸೆಯಲ್ಲಿ? ಯಾರು ಕೊಟ್ಟದ್ದು ಪೆನ್ನು?’’ ಸಣಕಲು ವಿದ್ಯಾರ್ಥಿ ಕೇಳಿದ.

‘‘ಕನ್ನಡ ಪಂಡಿತರು ಕೊಟ್ಟದ್ದು. ಬಹುಮಾನವಾಗಿ’’ ಮುಸ್ತಫಾ ಮೆಲ್ಲಗೆ ಉತ್ತರಿಸಿದ.
‘‘ಕೊಟ್ಟದ್ದೋ...ಎಗರಿಸಿದ್ದೋ...’’ ಇನ್ನೊಬ್ಬ ತನ್ನ ತೋರು ಬೆರಳನ್ನು ಮುಸ್ತಫಾನ ಹಣೆಗೆ ಚುಚ್ಚಿ ಕೇಳಿದ.
‘‘ಕೊಟ್ಟದ್ದು. ಬಹುಮಾನವಾಗಿ ಕೊಟ್ಟದ್ದು...’’ ಮುಸ್ತಫಾ ಜೋರಲ್ಲಿ ಹೇಳಿದ.
‘‘ಯಾವ ದೇಶ ಸೇವೆ ಮಾಡಿದ್ದಕ್ಕೆ ಕೊಟ್ಟದ್ದೋ?’’ ಕುಳ್ಳಗಿನ ಹುಡುಗ ವ್ಯಂಗ್ಯದಿಂದ ಕೇಳಿದ.

‘‘ಭಾಷಣದಲ್ಲಿ ಬಹುಮಾನ ಪಡೆದದ್ದಕ್ಕೆ...’’ ಮುಸ್ತಫಾ ಉತ್ತರಿಸಿದ. ‘‘ಮುಸಲರು ಈ ದೇಶದಲ್ಲಿ ಜನಸಂಖ್ಯೆ ಹೆಚ್ಚಿಸಿದ್ದಕ್ಕೆ ಪಂಡಿತರು ಬಹುಮಾನ ಕೊಟ್ಟದ್ದಂತೆ...’’ ಸಣಕಲು ವ್ಯಕ್ತಿಯ ತಮಾಷೆಗೆ ಉಳಿದವರು ನಕ್ಕರು.
‘‘ಎಲ್ಲ ಮುಸಲರು ಹತ್ತತ್ತು ಮಕ್ಕಳು ಹುಟ್ಟಿಸಬೇಕು ಎಂದು ಭಾಷಣ ಮಾಡಿದೆಯಂತೆ ಹೌದಾ?’’ ಗಡ್ಡಧಾರಿ ಒರಟಾಗಿ ಕೇಳಿದ.
ಮುಸ್ತಫಾ ಬೆಚ್ಚಿ ಬಿದ್ದ. ತನ್ನ ಅಂದಿನ ಭಾಷಣವೇ ಇಲ್ಲಿರುವವರ ಸಿಟ್ಟಿಗೆ ಕಾರಣ ಎನ್ನುವುದು ಅವನಿಗೆ ಅರ್ಥವಾಯಿತು. ಆದರೆ ಅವರನ್ನು ಹೇಗೆ ಸಮಾಧಾನಿಸುವುದು ಎನ್ನುವುದು ಗೊತ್ತಾಗಲಿಲ್ಲ.
‘‘ನಿನ್ನ ಮನೆಯಲ್ಲಿ ಎಷ್ಟು ಮಕ್ಕಳು’’ ಸಣಕಲು ವ್ಯಕ್ತಿ ಕೇಳಿದ.
‘‘ಇಬ್ಬರು. ನಾನು ಮತ್ತು ನನ್ನ ತಂಗಿ...’’ ಮುಸ್ತಫಾ ತಕ್ಷಣ ಹೇಳಿದ.
‘‘ಸುಳ್ಳು ಹೇಳುತ್ತಿದ್ದಾನೆ...ಏನಿದ್ದರೂ ಒಂದು ಡಜನ್‌ಗಿಂತ ಕಮ್ಮಿ ಮಕ್ಕಳು ಇರಲಿಕ್ಕಿಲ್ಲ...’’ ಕುಳ್ಳಗಿನ ವ್ಯಕ್ತಿ ಮುಸ್ತಫಾನನ್ನು ಅಲ್ಲಗಳೆದ.
‘‘ಇಲ್ಲ. ನಮ್ಮ ಮನೆಯಲ್ಲಿ ಇಬ್ಬರೇ ಮಕ್ಕಳು.....’’ ಎಂದು ಹೇಳಿದವನು ತಕ್ಷಣ ಸೇರಿಸಿದ ‘‘ನಾವು ಎಲ್ಲ ಮುಸ್ಲಿಮರ ಹಾಗೆ ಅಲ್ಲ...’’
ಅವರಿಗೇಕೋ ತುಸು ಸಮಾಧಾನವಾದ ಹಾಗೆ ಅನ್ನಿಸಿತು.
‘‘ಹೂಂ...ಸರಿ. ಇನ್ನು ಮುಂದೆ ಹಾಗೆಲ್ಲ ಭಾಷಣ ಮಾಡಿದರೆ ನಿನ್ನ ಸ್ಥಿತಿ ಚೆನ್ನಾಗಿರುವುದಿಲ್ಲ ನೆನಪಿಟ್ಟುಕೋ...’’ ಸಣಕಲ ಎಚ್ಚರಿಸಿದ.
ಮುಸ್ತಫಾ ವೌನವಾಗಿದ್ದ.
‘‘ಶುಕ್ರವಾರ ನಮಾಝ್ ಮಾಡಲು ಬೇಗ ತರಗತಿ ಮುಗಿಸಬೇಕು ಎಂದು ಪ್ರಾಂಶುಪಾಲರಿಗೆ ಅರ್ಜಿ ಕೊಟ್ಟಿದ್ದೀಯಂತೆ ಹೌದಾ?’’ ಕುಳ್ಳ ವ್ಯಕ್ತಿ ಕೇಳಿದ.
ಮುಸ್ತಫಾ ಉತ್ತರಿಸಲಿಲ್ಲ.
‘‘ಇದು ಪಾಕಿಸ್ತಾನ ಅಲ್ಲ. ಬಾಲ ಬಿಚ್ಚಿದರೆ ಹೇಗೆ ಕತ್ತರಿಸಬೇಕು ಎಂದು ನಮಗೆ ಚೆನ್ನಾಗಿ ಗೊತ್ತುಂಟು. ಮರ್ಯಾದೆಯಲ್ಲಿ ತರಗತಿಗೆ ಬರಬೇಕು, ಹೋಗಬೇಕು...ಗೊತ್ತಾಯ್ತಾ?’’ ಸಣಕಲ ವ್ಯಕ್ತಿ ಹೇಳಿದ.
‘‘ಸರಿ’’ ಮುಸ್ತಫಾ ತಲೆಯಾಡಿಸಿದ.
 ‘‘ಇನ್ನು ಮುಂದೆ ಆ ಪಂಡಿತರ ಪೆನ್ನನ್ನು ಹೀಗೆ ಕಿಸೆಯಲ್ಲಿ ಹಾಕಿಕೊಂಡು ಬರಬಾರದು. ಇನ್ನು ಈ ಪೆನ್ನು ಕಿಸೆಯಲ್ಲಿ ಕಂಡರೆ ಅದನ್ನು ಮುರಿದು ಮೋರಿಗೆ ಎಸೆಯಲಿಕ್ಕೆ ಉಂಟು. ಅದನ್ನು ಮನೆಯಲ್ಲಿಟ್ಟು ಬರಬೇಕು...ಗೊತ್ತಾಯ್ತಾ?’’ ಸಣಕಲು ವ್ಯಕ್ತಿ ಮತ್ತೆ ಹೇಳಿದ.


ಮುಸ್ತಫಾ ತಕ್ಷಣ ಪೆನ್ನನ್ನು ಕಿಸೆಯಿಂದ ತೆಗೆದು, ತನ್ನ ಚೀಲದೊಳಗೆ ಹಾಕಿ ಬಿಟ್ಟ. ‘‘ಹೂ...ಹಾಗೆ...’’ ಸಣಕಲನಿಗೆ ಮುಸ್ತಫಾನ ವರ್ತನೆ ಇಷ್ಟವಾಯಿತು. ‘‘ಹೋಗು...ಮರ್ಯಾದೆಯಲ್ಲಿ ತರಗತಿಗೆ ಹೋಗಿ...ಪಾಠ ಕಲಿತು ಜಾಣನಾಗಿ ಮನೆಗೆ ವಾಪಸಾಗಬೇಕು. ಅಧಿಕಪ್ರಸಂಗಕ್ಕೆ ಹೋಗಬೇಡ. ಗೊತ್ತಾಯ್ತ? ಭವಿಷ್ಯದ ಮೇಲೆ ಗಮನ ಇರಲಿ...’’ ಸಣಕಲ ಬುದ್ಧಿವಾದ ಹೇಳಿದ.


ಮುಸ್ತಫಾ ತಿಳಿಯಿತೆಂದು ತಲೆಯಾಡಿಸಿದ. ‘‘ತರಗತಿಯಲ್ಲಿ ಏನಾದರೂ ಸಮಸ್ಯೆಯಿದ್ದರೆ ನನ್ನಲ್ಲಿ ಬಂದು ಹೇಳು. ನಾನು ಇತ್ಯರ್ಥ ಪಡಿಸುತ್ತೇನೆ...’’ ಸಣಕಲ ಮುಸ್ತಫಾನಿಗೆ ಅಭಯ ನೀಡಿದ. ಮುಸ್ತಫಾನಿಗೆ ಈಗ ತುಸು ಜೀವ ಬಂತು. ‘‘ಸರಿ ಸಾರ್’’ ಎಂದ. ಸಾರ್ ಎಂದದ್ದು ಸಣಕಲನಿಗೆ ತುಂಬಾ ಇಷ್ಟವಾಯಿತು. ‘‘ಗುಡ್...ಹೋಗು...’’ ಎಂದು ಅಪ್ಪಣೆ ನೀಡಿದ. ಅದಕ್ಕೇ ಕಾಯುತ್ತಿದ್ದವನಂತೆ ಕಾಲೇಜು ಗೇಟಿನಾಚೆಗೆ ಓಡತೊಡಗಿದ. ಗೇಟು ದಾಟಿದ್ದೇ ಮುಸ್ತಫಾನಿಗೆ ಹಿಂದಿನ ಬೆಂಚಿನ ಸುಧಾಕರ ಜೊತೆಯಾದ. ಅವನು ಏದುಸಿರು ಬಿಡುತ್ತಾ ಕೇಳಿದ ‘‘ಏನಂತೆ? ಏನಂತೆ? ಅವರದು...’’
ಮುಸ್ತಫಾ ಉತ್ತರಿಸಲಿಲ್ಲ.
 ‘‘ಎಂತ...ಬೈದರಾ? ಜೋರು ಮಾಡಿದರಾ? ಪ್ರಿನ್ಸಿಪಾಲ್‌ಗೆ ಕಂಪ್ಲೇಂಟ್ ಮಾಡುವನಾ?’’ ಸುಧಾಕರ ಆತುರದಿಂದ ಮತ್ತೆ ಪ್ರಶ್ನಿಸಿದ.
‘‘ಬೇಡ ಬೇಡ’’ ಮುಸ್ತಫಾ ತಕ್ಷಣ ನಿರಾಕರಿಸಿದ.
‘‘ಅವರೆಲ್ಲ ಸೀನಿಯರ್‌ಗಳು. ಆ ಸಣಕಲು, ಉದ್ದದ ವ್ಯಕ್ತಿ ಇದ್ದಾನಲ್ಲ? ಅವನನ್ನು ಎಲ್ಲರೂ ದೋಂಟಿ ಸತೀಶ ಎಂದು ತಮಾಷೆ ಮಾಡ್ತಾರೆ. ಉದ್ದ ಇದ್ದಾನಲ್ಲ ಅದಕ್ಕೆ. ಅವನು ಕಾಲೇಜಿನ ಎಬಿವಿಪಿ ಸಂಘಟನೆಯ ಅಧ್ಯಕ್ಷ’’

ವೇಗವಾಗಿ ನಡೆಯುತ್ತಿದ್ದ ಮುಸ್ತಫಾ ಒಮ್ಮೆಲೆ ನಿಂತು ‘‘ಹೌದಾ?’’ ಎಂದು ಕೇಳಿದ. ‘‘ಹೌದು. ಅವರು ಎಂತ ಕೇಳಿದ್ದು ನಿನ್ನಲ್ಲಿ? ಏನಾದ್ರೂ ಜೋರು ಮಾಡಿದರಾ?’’
‘‘ಇಲ್ಲ, ಇಲ್ಲ. ತರಗತಿಯಲ್ಲಿ ಏನಾದರೂ ಸಮಸ್ಯೆಯಿದ್ದರೆ ನಮ್ಮಲ್ಲಿ ದೂರು ಹೇಳು. ಪರಿಹರಿಸುತ್ತೇವೆ...ಎಂದರು. ನಾನು ಆಯಿತು ಎಂದೆ’’ ಮುಸ್ತಫಾ ನಡೆದದ್ದನ್ನು ಮರೆ ಮಾಚಿದ.
‘‘ಮತ್ತೆ ಇಷ್ಟು ಹೊತ್ತು ಅವರು ನಿನ್ನಲ್ಲಿ ಮಾತನಾಡಿದ್ದು, ವಿಚಾರಣೆ ನಡೆಸಿದ್ದು ಏನು?’’ ಸುಧಾಕರ ಅರ್ಥವಾಗದೆ ಕೇಳಿದ.
‘‘ಹಾಗೇನಿಲ್ಲ. ‘ನೀನು ಜನಸಂಖ್ಯೆ ದೇಶಕ್ಕೆ ಶಾಪ ಎಂದು ಮಾತನಾಡಬೇಕಾಗಿತ್ತು. ವರ ಎಂದು ಮಾತನಾಡಿದ್ದು ತಪ್ಪು. ಇನ್ನು ಮುಂದೆ ಭಾಷಣ ಮಾಡುವಾಗ ಹೀಗೆಲ್ಲ ಮಾಡಬೇಡ’ ಎಂದು ಸಲಹೆ ನೀಡಿದರು. ನಾನು ಆಯಿತು ಎಂದೆ’’ ಮುಸ್ತಫಾ ಜಾಣತನದಿಂದ ಹೇಳಿದ.

‘‘ಏನು ಭಾಷಣ ಮಾಡಬೇಕು, ಮಾಡಬಾರದು ಎಂದು ಹೇಳುವುದಕ್ಕೆ ಅವರೇನು ಗೌವರ್ನ್‌ಮೆಂಟಾ ಅಥವಾ ಪೋಲೀಸಾ? ನನಗೆ ಬೇಕಾದ ವಿಷಯ ಮಾತನಾಡುವುದು ನನ್ನಿಷ್ಟ ಎಂದು ಹೇಳಬೇಕಾಗಿತ್ತು ಅವರಿಗೆ’’ ಸುಧಾಕರ ಸಿಟ್ಟಿನಿಂದ ಹೇಳಿದ. ‘‘ಇರಲಿ ಬಿಡು. ಮತ್ತೆ ನಾನು ಜನಸಂಖ್ಯೆ ದೇಶಕ್ಕೆ ವರ ಎಂದು ಹೇಳಿದ್ದೂ ಸರಿಯಲ್ಲ. ದೇಶದಲ್ಲಿ ಜನಸಂಖ್ಯಾ ಸ್ಫೋಟ ನಡೆಯುತ್ತಿದೆ. ಬಡವರು ಹೆಚ್ಚುತ್ತಿದ್ದಾರೆ...ನನ್ನದೂ ತಪ್ಪಿದೆ’’ ಮುಸ್ತಫಾ ಹೇಳಿದ.

‘‘ನಿನ್ನದು ತಪ್ಪು ಇದ್ದರೆ ನಿನಗೆ ಮಂಗಳೂರು ಕಾಲೇಜಿನಲ್ಲಿ ಬಹುಮಾನ ಕೊಡುತ್ತಿದ್ದರಾ? ಕನ್ನಡ ಪಂಡಿತರು ನಿನಗೆ ತಮ್ಮ ಪೆನ್ನು ಬಹುಮಾನ ಕೊಡುತ್ತಿದ್ದರಾ? ಈ ದೋಂಟಿ ಸತೀಶನಿಗೆ ಏನು ಗೊತ್ತು. ಒಂದೊಂದು ಕ್ಲಾಸ್‌ನಲ್ಲಿ ಎಷ್ಟು ಬಾರಿ ಫೇಲಾಗಿದ್ದಾನೆ ಗೊತ್ತಾ? ಅವನಿಗೆ ನಿಮ್ಮ ಜಾತಿಯವರನ್ನು ಕಂಡರೆ ಅಷ್ಟಕ್ಕಷ್ಟೇ...ಫಿಲೋಮಿನಾ ಕಾಲೇಜಿನಲ್ಲಿ ಇವರು ಹೀಗೆ ನಿಮ್ಮ ಜಾತಿಯವರನ್ನೇನಾದರೂ ತಡೆದು ನಿಲ್ಲಿಸಿ ಕೇಳಿದ್ದರೆ ಕಮ್ಯುನಲ್ ಕ್ಲಾಷ್ ಆಗ್ತಿತ್ತು ಗೊತ್ತುಂಟಾ...ಪುತ್ತೂರಿಗೆ ಬೆಂಕಿ ಬೀಳುತ್ತಿತ್ತು...’’ ಸುಧಾಕರ ಸಮಸ್ಯೆಯನ್ನು ಬೆಳೆಸಲು ನೋಡುತ್ತಿದ್ದರೆ, ಮುಸ್ತಫಾ ಸಮಸ್ಯೆಯನ್ನು ಮುಗಿಸಲು ನೋಡುತ್ತಿದ್ದ. ‘‘ನೀನು ಸುಮ್ಮನಿರು. ಅವರು ತುಂಬಾ ಒಳ್ಳೆಯವರ ಹಾಗೆ ಕಾಣುತ್ತಾರೆ. ಸಮಸ್ಯೆ ಏನಿದ್ದರೂ ನಮ್ಮತ್ರ ಬಂದು ಹೇಳು ಎಂದಿದ್ದಾರೆ...’’ ಮುಸ್ತಫಾ ಹೇಳಿದ.
‘‘ನಿನ್ನ ಕಿಸೆಯಲ್ಲಿರುವ ಪೆನ್ನು ಎಲ್ಲಿ?’’ ಸುಧಾಕರ ಕೇಳಿದ.
‘‘ಬ್ಯಾಗಿನೊಳಗಿಟ್ಟಿದ್ದೇನೆ’’ ಮುಸ್ತಫಾ ಚುಟುಕಾಗಿ ಮುಗಿಸಿದ.


‘‘ಯಾಕೆ? ಅಥವಾ ಅವರು ಕಿತ್ತುಕೊಂಡರಾ?’’ ಸುಧಾಕರ ಅನುಮಾನದಿಂದ ಕೇಳಿದ. ‘‘ಇಲ್ಲ ಇಲ್ಲ’’ ಎಂದವನೇ ಮುಸ್ತಫಾ ಬ್ಯಾಗು ತೆರೆದು ಪೆನ್ನನ್ನು ತೋರಿಸಿದ. ‘‘ಅವರು ತುಂಬಾ ಒಳ್ಳೆಯವರು. ಮೇಷ್ಟ್ರು ಕೊಟ್ಟ ಪೆನ್ನನ್ನು ಜಾಗೃತೆಯಾಗಿ ಇಟ್ಟುಕೊಳ್ಳಬೇಕು. ಹೀಗೆ ಶರ್ಟಿನ ಕಿಸೆಯಲ್ಲಿಡುವುದು ಸರಿಯಲ್ಲ. ಬ್ಯಾಗಿನೊಳಗಿಟ್ಟುಕೋ ಎಂದರು’’ ಮುಸ್ತಫಾ ವಿವರಿಸಿದ.

ಸುಧಾಕರನಿಗೆ ಉತ್ತರದಿಂದ ಸಮಾಧಾನವಾಗಲಿಲ್ಲ. ಆದರೂ ಪ್ರಶ್ನೆಗಳಿಗೆಲ್ಲ ಮುಸ್ತಫಾ ತಟಕ್ಕನೆ ಉತ್ತರಕೊಡುತ್ತಿದ್ದ. ‘‘ಸರಿ. ಆದರೆ ಅವರಿಗೆ ಹೆದರಬೇಡ ನೀನು. ನಾನಿದ್ದೇನೆ. ನಮ್ಮ ಕ್ಲಾಸಿನ ನರೇಶನಿಗೂ ಅವರನ್ನು ಕಂಡರೆ ಆಗುವುದಿಲ್ಲ. ಸೀನಿಯರ್ ಆದರೇನು? ನಾವೂ ಇಲ್ಲಿ ಫೀಸು ಕಟ್ಟಿ ಓದುವುದಲ್ಲವಾ? ಜಾಸ್ತಿ ಮಾತನಾಡಿದರೆ ರ್ಯಾಗಿಂಗ್ ಮಾಡಿದರು ಅಂತ ಪೊಲೀಸ್ ಸ್ಟೇಶನ್‌ನಲ್ಲಿ ಕಂಪ್ಲೇಟ್ ಕೊಟ್ಟರೆ ಆಯಿತು. ನರೇಶನ ಅಪ್ಪ ಗೊತ್ತುಂಟಲ್ಲ..? ಅವರು ಪುತ್ತೂರು ಕಾಂಗ್ರೆಸಿನ ಬ್ಲಾಕ್ ಅಧ್ಯಕ್ಷರು. ಈ ಕಾಲೇಜಿನಲ್ಲಿ ಮಾತ್ರ ಇವರದು ಹಾರಾಟ. ಫಿಲೋಮಿನಾ ಕಾಲೇಜಿನಲ್ಲಿ ಎನ್‌ಎಸ್‌ಯುಐದ್ದೇ ಕಾರುಬಾರು. ಫಿಲೋಮಿನಾ ಕಾಲೇಜಿನಲ್ಲಿ ಸೀಟು ಸಿಕ್ಕಿದ್ದಿದ್ದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ...’’ ಎಂದವನೇ ಮುಸ್ತಫಾನ ಕಿವಿಯ ಬಳಿ ಬಂದು ಹೇಳಿದ ‘‘ಇದು ಚಡ್ಡಿಗಳ ಕಾಲೇಜು’’
***

(ರವಿವಾರದ ಸಂಚಿಕೆಗೆ)

share
ಬಿ.ಎಂ.ಬಶೀರ್
ಬಿ.ಎಂ.ಬಶೀರ್
Next Story
X