ಏಕೀಕೃತ ಸರಕಾರಿ ವ್ಯಾಜ್ಯ ನಿರ್ವಹಣಾ ವ್ಯವಸ್ಥೆ ಸ್ಥಾಪನೆ
2017-18ನೆ ಸಾಲಿನಲ್ಲಿ ಕಾನೂನು ಮತ್ತು ನ್ಯಾಯಾಲಯಗಳ ಇಲಾಖೆಗೆ ಒಟ್ಟು 731 ಕೋಟಿ ರೂ. ಒದಗಿಸಲಾಗಿದೆ. ಎಲ್ಲಾ ರೀತಿಯ ಸರಕಾರಿ ವ್ಯಾಜ್ಯಗಳ ಪರಿಣಾಮಕಾರಿ ಮೇಲ್ವಿಚಾರಣೆ, ನಿರ್ವಹಣೆ ಹಾಗೂ ನಿಯಂತ್ರಣಕ್ಕಾಗಿ ಹಾಗೂ ಕಾನೂನು ಅಧಿಕಾರಿಗಳ ಕೆಲಸ ಹಾಗೂ ಕಾರ್ಯನಿರ್ವಹಣೆಯ ಮೇಲ್ವಿಚಾರಣೆಗೆ ‘ಕರ್ನಾಟಕ ಏಕೀಕೃತ ಸರಕಾರಿ ವ್ಯಾಜ್ಯನಿರ್ವಹಣಾ ವ್ಯವಸ್ಥೆ’ ಸ್ಥಾಪನೆ.
ಕೆಆರ್‌ಇಡಿಎಲ್‌ನ ನೆರವಿನೊಂದಿಗೆ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಮೈಸೂರು, ಗದಗ, ಕಲಬುರಗಿ, ತುಮಕೂರು ಮತ್ತು ಮಂಗಳೂರು ಜಿಲ್ಲಾ ನ್ಯಾಯಾಲಯದ ಸಂಕೀರ್ಣಗಳಿಗೆ ಗ್ರಿಡ್ ಸಂಪರ್ಕವಿರುವ ಸೌರ ಛಾವಣಿ ಅಳವಡಿಕೆ. ಎಲ್ಲಾ ತಾಲೂಕು ನ್ಯಾಯಾಲಯ ಸಂಕೀರ್ಣಗಳಲ್ಲಿ 8.12 ಕೋಟಿ ರೂ. ವೆಚ್ಚದಲ್ಲಿ ಶುದ್ಧ ನೀರಿನ ಘಟಕಗಳ ಸ್ಥಾಪನೆ.
Next Story





