ಮೀನುಗಾರಿಕೆ ಇಲಾಖೆಗೆ 337 ಕೋಟಿ ರೂ.
♦ಮಲ್ಪೆಮತ್ತು ಮಂಗಳೂರು ಮೀನುಗಾರಿಕೆ ಬಂದರುಗಳಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ದೋಣಿಗಳ ಸುರಕ್ಷಿತ ತಂಗುದಾಣಕ್ಕಾಗಿ 75 ಮೀ. ಉದ್ದದವರೆಗೆ ಜಟ್ಟಿ ವಿಸ್ತರಣೆಗೆ ಆದೇಶಿಸಲಾಗಿದೆ.
♦ ಮತ್ಸಕೃಷಿ ಆಶಾಕಿರಣ ಯೋಜನೆಯಡಿ ಪ್ರಮುಖ ಕೆರೆಗಳ 2,500 ಹೆಕ್ಟೇರ್ ಪ್ರದೇಶದಲ್ಲಿ ಮೀನು ಉತ್ಪಾದನೆಗೆ ಪ್ರತೀ ಹೆಕ್ಟೇರ್‌ಗೆ 4 ಸಾವಿರ ಬಲಿತ ಮೀನುಮರಿ ಹಾಗೂ 2 ಟನ್ ಕೃತಕ ಆಹಾರ ಖರೀದಿಗೆ ಘಟಕ ವೆಚ್ಚದ ಶೇ.50ರಷ್ಟು ಹಾಗೂ ಗರಿಷ್ಠ 27 ಸಾವಿರ ರೂ. ನೀಡಲು 6.75 ಕೋಟಿ ರೂ.ಅನುದಾನ ನೀಡಲಾಗಿದೆ.
♦ಕೃಷಿಕರಿಗೆ ಅವರ ಜಮೀನುಗಳಲ್ಲಿ ಕೊಳ ನಿರ್ಮಿಸಿ ಸಾಂಧ್ರೀಕೃತ ಮೀನುಕೃಷಿ ಕೈಗೊಳ್ಳಲು ಉತ್ತೇಜನ ನೀಡಲಾಗುವುದು. ಹೂಡಿಕೆ ವೆಚ್ಚ ಸೇರಿದಂತೆ ಮೀನು ಕೊಳ ನಿರ್ಮಾಣದ ಘಟಕ ವೆಚ್ಚ 8.50 ಲಕ್ಷ ರೂ. ಹಾಗೂ ಗರಿಷ್ಠ 4.25 ಲಕ್ಷ ರೂ.ಗೆ ಒಳಪಟ್ಟು ಶೇ.50ರಷ್ಟು ಸಹಾಯಧನ ನೀಡಿ ಮೀನುಕೃಷಿಗೆ ಉತ್ತೇಜನ ನೀಡಲಾಗುವುದು.
♦ ಮೀನುಗಾರರ ಸಹಕಾರ ಸಂಘಗಳಿಗೆ ತಮ್ಮ ಸ್ವಂತ ನಿವೇಶನದಲ್ಲಿ ಕನಿಷ್ಠ 500 ಚದರ ಅಡಿಯ ಮೀನು ಸಂಗ್ರಹಣೆ ಹಾಗೂ ಮಾರುಕಟ್ಟೆ ಕಟ್ಟಡ ನಿರ್ಮಿಸಲು 10ಲಕ್ಷ ರೂ.ಘಟಕ ವೆಚ್ಚದಲ್ಲಿ ಶೇ.75 ರಷ್ಟು ಸಹಾಯಧನ ಒದಗಿಸಲಾಗುವುದು. ಪ್ರಾರಂಭಿಕವಾಗಿ 20 ಕಟ್ಟಡಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗುವುದು.
♦ಕಡಲ ತೀರದ 3 ಜಿಲ್ಲೆಗಳಲ್ಲಿ 200 ಮಂಜುಗಡ್ಡೆ ಸ್ಥಾವರಗಳಿಗೆ ಹಾಗೂ 35 ಶೈತ್ಯಾಗಾರಗಳಿಗೆ ನೆರವು ನೀಡಲು ಪ್ರಸ್ತುತ ವಿದ್ಯುಚ್ಛಕ್ತಿ ಮೇಲೆ ನೀಡುವ ಸಹಾಯಧನ ಪ್ರತಿ ಯುನಿಟ್‌ಗೆ 1.50ರೂ.ನಿಂದ 1.75 ರೂ. ಗೆ ಹೆಚ್ಚಳ ಮಾಡಲಾಗುವುದು. ಹಾಗೂ ಪ್ರತೀ ವರ್ಷ ಪ್ರತಿ ಸ್ಥಾವರಕ್ಕೆ ಇರುವ ಮಿತಿ 3ಲಕ್ಷ ರೂ.ನಿಂದ 3.50 ಲಕ್ಷ ರೂ.ಗೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ 6 ಕೋಟಿ ರೂ.ಒದಗಿಸಲಾಗುವುದು.







