ಯುವತಿಯ ಸ್ನಾನದಕೋಣೆ ದೃಶ್ಯವನ್ನು ಚಿತ್ರಿಸಿದ ಬಿಜೆಪಿ ಯುವ ನಾಯಕನ ಬಂಧನ

ಪೂಚ್ಚಾಕ್ಕಲ್, ಮಾ.16: ಯುವತಿ ಸ್ನಾನ ಮಾಡುವ ದೃಶ್ಯಗಳನ್ನು ಗುಪ್ತ ಕ್ಯಾಮರಾ ಇಟ್ಟು ಚಿತ್ರೀಕರಿಸಿದ ಬಿಜೆಪಿ ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ.
ಅರೋಪಿ ಅಜಯನ್ (44) ಬಿಜೆಪಿಯ ಪೆರುಂಬಳಂ ಪಂಚಾಯತ್‌ನ ಅಧ್ಯಕ್ಷ ಹಾಗೂ ಆರೂರ್ ಮಂಡಲ ಕಾರ್ಯವಾಹಕ್ ಆಗಿದ್ದಾನೆ.
ಕಳೆದ ಪಂಚಾಯತ್ ಚುನಾವಣೆ ವೇಳೆ ಈತ ತೈಕಾಟ್ಟುಶ್ಶೇರಿ ಬ್ಲಾಕ್ ಪಂಚಾಯತ್‌ಗೆ ಪೆರುಂಬಳಂನಿಂದ ಚುನಾವಣೆಗೆ ಸ್ಪರ್ಧಿಸಿದ್ದಾನೆ. ಕಳೆದ ದಿವಸ ಯುವತಿ ಸ್ನಾನ ಮಾಡುವಾಗ ವೆಂಟಿಲೇಟರ್‌ನಲ್ಲಿ ಗುಪ್ತ ಕ್ಯಾಮರಾ ಇರಿಸಿ ಈತ ಸ್ನಾನದ ದೃಶ್ಯವನ್ನು ಚಿತ್ರೀಕರಿಸಿದ್ದಾನೆ.
ಅಂದೇ ಪೂಚ್ಚಕ್ಕಲ್ ಪೊಲೀಸರಿಗೆ ದೂರು ನೀಡಲಾಗಿತ್ತು.
Next Story





