Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹೇಗೇಗೆಲ್ಲಾ ಮೊಟ್ಟೆ ತಿನ್ನುತ್ತೇವೆ ನಾವು...

ಹೇಗೇಗೆಲ್ಲಾ ಮೊಟ್ಟೆ ತಿನ್ನುತ್ತೇವೆ ನಾವು ಭಾರತೀಯರು ?

ಮೊಟ್ಟೆ ಒಂದು ರೂಪ ಹಲವು !

ವಾರ್ತಾಭಾರತಿವಾರ್ತಾಭಾರತಿ16 March 2017 1:57 PM IST
share
ಹೇಗೇಗೆಲ್ಲಾ ಮೊಟ್ಟೆ ತಿನ್ನುತ್ತೇವೆ ನಾವು ಭಾರತೀಯರು ?

ಭಾರತೀಯರು ಮೊಟ್ಟೆ ಪ್ರಿಯರು ಎಂದೇ ಹೇಳಬಹುದು. ಮೊಟ್ಟೆಯನ್ನು ವಿವಿಧ ರೂಪದಲ್ಲಿ ಸೇವಿಸುತ್ತಾರೆ ಭಾರತೀಯರು, ಮೊಟ್ಟೆ ಭುರ್ಜಿ, ಮಸಾಲ ಆಮ್ಲೆಟ್ ಹಾಗೂ ಮೊಟ್ಟೆ ಪದಾರ್ಥ ಎಂದರೆ ಬಹುತೇಕರಿಗೆ ಅಚ್ಚುಮೆಚ್ಚು. ಹಲವು ಪ್ರಾದೇಶಿಕ ಖಾದ್ಯಗಳ ಅವಿಭಾಜ್ಯ ಅಂಗವಾಗಿದೆ ಮೊಟ್ಟೆ. ಮೇಲಾಗಿ ಮೊಟ್ಟೆ ಪದಾರ್ಥ ತಯಾರಿಸುವುದೂ ಸುಲಭ.

ಮಕ್ಕಳಿಗಂತೂ ಸ್ಕ್ರ್ಯಾಂಬಲ್ಡ್, ಡೀಪ್ ಫ್ರೈಡ್ ಹಾಗೂ ಬೇಯಿಸಿದ ಮೊಟ್ಟೆಯೆಂದರೆ ಬಲು ಇಷ್ಟ

ಎಗ್ ದೋಸಾ :

ಈ ಮೊಟ್ಟೆ ದೋಸೆ ತಮಿಳುನಾಡಿನಲ್ಲಿ ಜನಪ್ರಿಯ. ಬೆಳಗ್ಗಿನ ಉಪಾಹಾರಕ್ಕೆ ಹಲವರು ಇದನ್ನು ಸೇವಿಸುತ್ತಾರೆ. ಮೊಟ್ಟೆಯನ್ನು ಒಡೆದು ಕಾವಲಿಗೆ ಸುರಿಯುತ್ತಿದ್ದಂತೆಯೇ ಅದರ ಮೇಲೆ ಮಸಾಲೆ ಪದಾರ್ಥಗಳನ್ನು ಚಿಮುಕಿಸಲಾಗುತ್ತದೆ.

ನರ್ಗಿಸಿ ಕೊಫ್ತ :

ಮುಘಲಾಯಿ ಮೀಟ್ ಬಾಲ್ ಗಳಂತೆ ಈ ಖಾದ್ಯ ಕೂಡ ಬಲು ಸ್ವಾದಿಷ್ಟ. ಗಟ್ಟಿಯಾಗಿ ಬೇಯಿಸಿದ ಮೊಟ್ಟೆಗಳನ್ನು ಮಸಾಲೆ ಪದಾರ್ಥಯುಕ್ತ ಕೀಮಾದಲ್ಲಿ ಮುಚ್ಚಿ ನಂತರ ಟೊಮ್ಯಾಟೋ ಪದಾರ್ಥದಲ್ಲಿ ಬೇಯಿಸಲಾಗುತ್ತದೆ.

ಮೊಟ್ಟೆ ಹಲ್ವಾ :

ಅಂಡೇ ಕೆ ಹಲ್ವಾ ಹಲವರಿಗೆ ತುಂಬಾ ಇಷ್ಟ. ಈ ಖಾದ್ಯವನ್ನು ಮೊಟ್ಟೆ, ಹಾಲು, ಒಣಹಣ್ಣುಗಳನ್ನು ಉಪಯೋಗಿಸಿ ತಯಾರಿಸಲಾಗುತ್ತದೆ. ಮೈಸೂರು ಭಾಗದಲ್ಲಿ ಮೊಟ್ಟೆ ಹಲ್ವಾಗೆ ಕೊಬ್ಬರಿ ತುರಿಯನ್ನೂ ಸೇರಿಸಲಾಗುತ್ತದೆ.

ಅಕುರಿ :

ನೋಡಲು ಮೊಟ್ಟೆ ಭುರ್ಜಿಯಂತಿದ್ದರೂ ಇದು ಪಾರ್ಸಿ ಶೈಲಿಯ ಸ್ಕ್ರ್ಯಾಂಬಲ್ಡ್ ಎಗ್ಸ್ ಆಗಿದ್ದು. ಪಾರ್ಸಿ ಸಾಂಬಾರ್ ಮಸಾಲೆಯೊಂದಿಗೆ ಮೊಟ್ಟೆಗಳನ್ನು ಬೇಯಿಸಲಾಗುತ್ತದೆ. ಬೇಯಿಸುವಾಗ ಈರುಳ್ಳಿ, ಟೊಮ್ಯಾಟೋ ಮತ್ತು ಹಸಿ ಮೆಣಸನ್ನೂ ಸೇರಿಸಲಾಗುತ್ತದೆ.

ಭಜಿ ಪರ್ ಈಡು :

ಇದು ಕೂಡ ಒಂದು ಪಾರ್ಸಿ ಖಾದ್ಯವಾಗಿದ್ದು, ತರಕಾರಿಗಳಾದ ಬಸಳೆ, ಮೆಂತ್ಯೆ ಸೊಪ್ಪು, ಬದನೆ, ಬೆಂಡೆ ಹಾಗೂ ಹಸಿರು ಬಟಾಣಿಯೊಂದಿಗೆ ಅದನ್ನು ಬೇಯಿಸಲಾಗುತ್ತದೆ. ಮೊಟ್ಟೆಗಳನ್ನು ಬಟಾಟೆ ವೇಫರ್ ಗಳೊಂದಿಗೆಯೂ ಬೇಯಿಸಲಾಗುತ್ತದೆ. ಪಾರ್ಸಿಗಳು ಉಪ್ಪು ಬಿಸ್ಕತ್ತಾದ ಖಾರಿಯೊಂದಿಗೆಯೂ ಮೊಟ್ಟೆಯನ್ನು ಬೇಯಿಸುತ್ತಾರೆ.

ಡೀಮುರ್ ಪಟೂರಿ :

ಮೊಟ್ಟೆಗಳನ್ನು ಮಸ್ಟರ್ಡ್ ಸಾಸ್ ಜತೆ ಬಾಳೆ ಎಲೆಯೊಳಗೆ ಸ್ಟೀಮ್ ಮಾಡಿ ಈ ಖಾದ್ಯ ತಯಾರಿಸಲಾಗುತ್ತದೆ.

ಎಗ್ ಬೋಂಡಾ/ ಬಜ್ಜಿ :

ಸಾಮಾನ್ಯ ಬೋಂಡಾಗಳಂತೆಯೇ ಎಗ್ ಬೋಂಡಾಗಳನ್ನೂ ತಯಾರಿಸಲಾಗುತ್ತದೆ.

ಬಂಗಾಳಿಗಳು ಬೇಯಿಸಿದ ಮೊಟ್ಟೆಯನ್ನು ಮಸಾಲೆ ಪದಾರ್ಥಯುಕ್ತ ಬಟಾಟೆಯೊಳಗಿಟ್ಟು ಅದನ್ನು ಹುರಿಯುತ್ತಾರೆ.

ಕೊಡಿ ಗುಡ್ಡು ಗಸಗಸಲ ಕುರ :

ಈ ಆಂಧ್ರ ಮಾದರಿಯ ಪದಾರ್ಥವನ್ನು ಗಸೆಗಸೆ ಬೀಜದ ಸಾಸ್ ಜತೆ ಮೊಟ್ಟೆಯನ್ನು ಬೇಯಿಸಿ ತಯಾರಿಸಲಾಗುತ್ತದೆ. ಅನ್ನ ಮತ್ತು ರೋಟಿಯೊಂದಿಗೆ ತಿನ್ನಲು ಇದು ರುಚಿಕರ.

ಕೇರಳ ಮಾದರಿಯ ಎಗ್ ರೋಸ್ಟ್ :

ಈ ಕೇರಳ ಮಾದರಿಯ ಖಾದ್ಯವನ್ನು ಮಸಾಲೆಯುಕ್ತ ಈರುಳ್ಳಿ, ಟೊಮ್ಯಾಟೋ ಮಿಶ್ರಣದೊಂದಿಗೆ ಮೊಟ್ಟೆಯನ್ನು ಬೇಯಿಸಿ ತಯಾರಿಸಲಾಗುತ್ತದೆ.

ಕೊಟ್ಟು ಪರೋಟ ಮತ್ತು ಮೊಟ್ಟೆ :

ಮುತ್ತೈ ಪರೋಟ ಎಂದೂ ಕರೆಯಲ್ಪಡುವ ಈ ಖಾದ್ಯ ತಮಿಳುನಾಡಿನ ರಸ್ತೆ ಬದಿ ತಳ್ಳುಗಾಡಿಗಳಲ್ಲಿ ತಯಾರಿಸಿ ಮಾರಾಟ ಮಾಡಲಾಗುತ್ತದೆ.

ಮಸಾಲೆ ಪದಾರ್ಥ, ಸ್ಕ್ರ್ಯಾಂಬಲ್ಡ್ ಮೊಟ್ಟೆ, ಟೊಮ್ಯಾಟೋ, ಈರುಳ್ಳಿ ಮಿಶ್ರಣ ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಈ ಖಾದ್ಯಕ್ಕೆ ಬೇಕಾದ ಎಲ್ಲಾ ಪದಾರ್ಥಗಳನ್ನು ಬಿಸಿ ಬಾಣಲೆಯಲ್ಲಿ ಕುಟ್ಟಲಾಗುತ್ತದೆ.

ಎಗ್ ಕೀಮಾ :

ಗುಜರಾತಿ ಖಾದ್ಯವಾಗಿರುವ ಎಗ್ ಕೀಮಾದಲ್ಲಿ ಮಾಂಸದ ಬದಲು ಬೇಯಿಸಿ ತುಂಡರಿಸಿದ ಮೊಟ್ಟೆಗಳನ್ನು ಬಳಸಲಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X