ಡೈರಿ ಗದ್ದಲ; ವಿಧಾನ ಸಭಾ ಕಲಾಪ ನಾಳೆಗೆ ಮುಂದೂಡಿಕೆ

ಬೆಂಗಳೂರು, ಮಾ.16: ವಿಧಾನಸಭೆಯಲ್ಲಿ ವಿಪಕ್ಷ ಬಿಜೆಪಿ ಶಾಸಕರು ಡೈರಿ ವಿಚಾರದಲ್ಲಿ ಚರ್ಚೆಗೆ ಅವಕಾಶ ಕೋರಿ ಗದ್ದಲವನ್ನುಂಟು ಮಾಡಿದ ಕಾರಣದಿಂದಾಗಿ ವಿಧಾನಸಭೆಯ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.
ಕಾಂಗ್ರೆಸ್ ಹೈಕಮಾಂಡ್‌ಗೆ ಸಲ್ಲಿಸಿದ ಕಪ್ಪಕಾಣಿಕೆಯ ವಿವರಗಳನ್ನು ಒಳಗೊಂಡ ಡೈರಿಯ ವಿಚಾರದ ಬಗ್ಗೆ ಬಿಜೆಪಿ ಶಾಸಕರು ಪ್ರಸ್ತಾಪಿಸಿ ಗದ್ದಲವನ್ನುಂಟು ಮಾಡಿದರು. ನಿಯಮ 69ರ ಅಡಿ ಚರ್ಚೆಗೆ ಅವಕಾಶ ನೀಡದಕ್ಕಾಗಿ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿ ಗದ್ದಲವನ್ನುಂಟು ಮಾಡಿದರು.
ಈ ವಿಚಾರದಲ್ಲಿ ಆಡಳಿತ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ಕಂಡು ಬಂತು. ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಬಿಜೆಪಿ ಗದ್ದಲ ,ಪ್ರತಿಭಟನೆ, ಧರಣಿಯ ಹಿನ್ನೆಲೆಯಲ್ಲಿ ಕಲಾಪವನ್ನು ಸ್ಪೀಕರ್ ಕೆ.ಬಿ. ಕೋಳಿವಾಡ್ ಶುಕ್ರವಾರಕ್ಕೆ ಮುಂದೂಡಿದರು.
Next Story





