ಕತರ್: ಅಪಘಾತ ಸಂತ್ರಸ್ತ ಭಾರತೀಯನಿಗೆ ಆರುಲಕ್ಷ ಕತರ್ ರಿಯಾಲ್ ನಷ್ಟಪರಿಹಾರ!

ದೋಹ, ಮಾ.16 ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಅಪ್ರಜ್ಞಾವಸ್ಥೆಯಲ್ಲಿರುವ ಕೇರಳದ ವ್ಯಕ್ತಿಗೆ ಆರು ಲಕ್ಷ ಕತರ್ ರಿಯಾಲ್ (ಸುಮಾರು ಒಂದು ಕೋಟಿಹತ್ತು ಲಕ್ಷ ರೂ.) ನಷ್ಟಪರಿಹಾರ ದೊರಕಿದೆ.ಕಣ್ಣೂರಿನ ಪಾನೂರ್ ವಿಳಕ್ಕೋಟ್ಟೂರ್‌ನ ಅಬ್ದುಲ್ಲ ಕೋಯರಿಗೆ ಕತರ್ ಸುಪ್ರೀಂಕೋರ್ಟು ಆರು ಲಕ್ಷ ರಿಯಾಲ್ ನಷ್ಟಪರಿಹಾವನ್ನು ನೀಡುವಂತೆ ತೀರ್ಪು ವಿಧಿಸಿದೆ.
2014 ಮೇ ಒಂದಕ್ಕೆ ಅಪಘಾತ ನಡೆದಿತ್ತು. ದುಹೈಲ್ ಎಂಬಲ್ಲಿನ ಒಂದು ಸೂಪರ್ ಮಾರ್ಕೆಟ್‌ನಲ್ಲಿ ಅಬ್ದುಲ್ಲ ಕೋಯ ಕೆಲಸಕ್ಕಿದ್ದರು. ಸೂಪರ್ ಮಾರ್ಕೆಟ್‌ಗೆ ಹತ್ತಿರದ ಮನೆಗೆ ಸಾಮಾನು ಕೊಂಡು ಹೋಗುತ್ತಿದ್ದಾಗ ಬೈಕ್ ಸವಾರ ಕತರ್ ಪ್ರಜೆ ಅಬ್ದುಲ್ಲರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಮಾರಕವಾಗಿ ಗಾಯಗೊಂಡ ಅಬ್ದುಲ್ಲ ಕೋಯ ಪ್ರಜ್ಞೆ ಕಳಕೊಂಡರು. "ಆ ನಂತರ ಕಳೆದ ಎರಡು ವರ್ಷಗಳಲ್ಲಿ ಹಮದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಇತ್ತೀಚೆಗೆ ಆಯುರ್ವೇದ ಚಿಕಿತ್ಸೆಗಾಗಿ ತಮಿಳ್ನಾಡಿನ ವೆಲ್ಲೂರ್ ಮೆಡಿಕಲ್ ಕಾಲೇಜಿಗೆ ಸೇರಿಸಲಾಗಿತ್ತು. ಇದೀಗ ಅಬ್ದುಲ್ಲ ಕೋಯ ಕೇರಳದಲ್ಲಿಯೇ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಬ್ದುಲ್ಲ ಕೋಯಾರಿಗೆ ಸುಮಾರು ಒಂದು ವರ್ಷದ ಕಾನೂನು ಹೋರಾಟದ ಬಳಿಕ ಆರು ಲಕ್ಷ ರಿಯಾಲ್ ನಷ್ಟ ಪರಿಹಾರ ಲಭಿಸಿದೆ.





