'ನಂಡೆ ಪೆಂಙಳ್' ಅಭಿಯಾನದಲ್ಲಿ ಸಹಭಾಗಿಗಳಾಗುವಂತೆ ಸಂಘಸಂಸ್ಥೆಗಳಲ್ಲಿ ಮನವಿ
ಮಂಗಳೂರು: ಮಾ 16, ಪ್ರಾಯ ಮೂವತ್ತು ದಾಟಿದ ಒಂದು ಸಾವಿರ ಹೆಣ್ಮಕ್ಕಳ ಮದುವೆಗಾಗಿ ಹಾಕಿಕೊಂಡ ಯೋಜನೆ ನಂಡೆ ಪೆಂಙಳ್. ಈ ಅಭಿಯಾನವು ದ.ಕ ಜಿಲ್ಲೆಯಾದ್ಯಂತ ಮಾರ್ಚ್ 2017 ರಿಂದ ಫೆಬ್ರವರಿ 2018ರ ತನಕ ನಡೆಯಲಿದೆ. ಜಿಲ್ಲೆಯ ಅನೇಕ ಪ್ರಮುಖ ಸಮಾಜ ಸೇವಾ ಸಂಸ್ಥೆಗಳು ಮತ್ತು ಮ್ಯಾರೇಜ್ ಕಮಿಟಿಗಳು ಈಗಾಗಲೇ ಈ ಅಭಿಯಾನದ ಸಹಭಾಗಿಗಳಾಗಿ ಸಹಕರಿಸುತ್ತಿದ್ದಾರೆ.
ಪ್ರಾಯ ಮೂವತ್ತು ದಾಟಿದ ಹೆಣ್ಮಕ್ಕಳಿಗೆ ದಾಂಪತ್ಯ ಭಾಗ್ಯ ಕಲ್ಪಿಸಿ ಅವರ ಮುಖದಲ್ಲಿ ನಗುವನ್ನು ಅರಳಿಸುವ ಈ ಪುಣ್ಯಕಾರ್ಯದಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಅತ್ಯಗತ್ಯ.ಈ ನಿಟ್ಟಿನಲ್ಲಿ ಸಹಭಾಗಿಗಳಾಗಿ ಸಹಕರಿಸಲು ಇಚ್ಚಿಸುವ ಸಾಮಾಜಿಕ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಮ್ಯಾರೇಜ್ ಕಮಿಟಿಗಳು, ಸ್ಪೋರ್ಟ್ಸ್ ಕ್ಲಬ್‌ಗಳು, ಯೂತ್ ಕ್ಲಬ್‌ಗಳು ಇತ್ಯಾದಿ ನಮ್ಮನ್ನು ಸಂಪರ್ಕಿಸಬಹುದು ಎಂದು ನಂಡೆ ಪೆಂಙಳ್ ಅಭಿಯಾನದ ಸಂಚಾಲಕ ಮುಹಮ್ಮದ್ ಯು.ಬಿ ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ-8951517480
Next Story





