ಜಿಯೋ ಉಚಿತ ಕೊಡುಗೆಗೆ ತಡೆಯಿಲ್ಲ, ಪುನರ್‌ಪರಿಶೀಲನೆಗೆ ಟ್ರಾಯ್‌ಗೆ ಸೂಚನೆ

ಹೊಸದಿಲ್ಲಿ,ಮಾ.16: ದೂರಸಂಪರ್ಕ ವಿವಾದಗಳ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಾಧಿಕರಣ(ಟಿಡಿಸ್ಯಾಟ್)ವು ಗುರುವಾರ ರಿಲಯನ್ಸ್ ಜಿಯೋದ ಉಚಿತ ಪ್ರಮೋಷನಲ್ ಆಫರ್‌ಗೆ ಯಾವುದೇ ತಡೆಯಾಜ್ಞೆಯನು ನೀಡಲಿಲ್ಲ, ಆದರೆ ಜಿಯೋಗೆ ಉಚಿತ ಕೊಡುಗೆಯನ್ನು ಮುಂದುವರಿಸಲು ನೀಡಿದ್ದ ಅನುಮತಿಗೆ ಸಂಬಂಧಿಸಿದ ವಿಷಯಗಳನ್ನು ಮರುಪರಿಶೀಲನೆ ನಡೆಸುವಂತೆ ಮತ್ತು ಆ ಕುರಿತು ವರದಿಯನ್ನು ಎರಡು ವಾರಗಳಲ್ಲಿ ತನಗೆ ಸಲ್ಲಿಸುವಂತೆ ಟ್ರಾಯ್‌ಗೆ ಸೂಚಿಸಿತು.
ಜಿಯೋದ ಉಚಿತ ಕೊಡುಗೆಗೆ ತಡೆಯಾಜ್ಞೆಯನ್ನು ಕೋರಿ ಸಲ್ಲಿಸಲಾಗಿರುವ ಮೇಲ್ಮನವಿ ಕುರಿತಂತೆ ಟ್ರಾಯ್,ಭಾರ್ತಿ ಏರ್‌ಟೆಲ್,ಐಡಿಯಾ ಸೆಲ್ಯುಲರ್ ಮತ್ತು ಜಿಯೋ ಸೇರಿದಂತೆ ಸಂಬಂಧಿಸಿದ ಎಲ್ಲ ಕಕ್ಷಿಗಳ ವಾದಗಳನ್ನು ಆಲಿಸಿದ ಬಳಿಕ ಟಿಡಿ ಸ್ಯಾಟ್ ಕಳೆದ ವಾರ ತನ್ನ ಆದೇಶವನ್ನು ಕಾಯ್ದಿರಿಸಿತ್ತು.
Next Story