ಸಿಎಂ ಪರಿಹಾರನಿಧಿಯಿಂದ 7.13ಲಕ್ಷ ರೂ ವೈದ್ಯಕೀಯ ವೆಚ್ಚ ಬಿಡುಗಡೆ: ಮೊಯ್ದಿನ್ ಬಾವ

ಮಂಗಳೂರು.ಮಾ,16:ಮುಖ್ಯ ಮಂತ್ರಿಯ ಪರಿಹಾರ ನಿಧಿಯಿಂದ 15 ಜನರಿಗೆ ಒಟ್ಟು 7,13,616 ರೂ. ವೈದ್ಯಕೀಯ ವೆಚ್ಚದ ಬಾಬ್ತು ಬಿಡುಗಡೆಯಾಗಿದೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಖತೀಜಮ್ಮ,ಮೋನಪ್ಪ ಕೊಟ್ಟಾರಿ,ದುಲೇಖ ಇವರಿಗೆ ತಲಾ 1ಲಕ್ಷ ,ಮೊಹಮ್ಮದ್ ರವರಿಗೆ ರೂ.97,892,ಗೀತಾ ರವರಿಗೆ 75 ಸಾವಿರ ರೂ,ಅಲೀಮಮ್ಮರವರಿಗೆ 60 ಸಾವಿರ ರೂ ,ಇಸ್ಮಾಯಿಲ್,ಕಮಲಾ ,ನಝೀರ್ ಅಹಮ್ಮದ್ ರವರಿಗೆ ತಲಾ 40ಸಾವಿರ ರೂ,ತಿಮ್ಮಪ್ಪ ಪೂಜಾರಿಗೆ ರೂ 34,697 ,ಮುಹಮ್ಮದ್ ದಾವೂದ್‌ಗೆ ರೂ30 ಸಾವಿರ,ಮುಹಮ್ಮದ್ ಯಾಸಿನ್‌ರಿಗೆ ರೂ 31 ಸಾವಿರ,ದೇವಕಿಯವರಿಗೆ 25 ಸಾವಿರ,ಶಾರದ ಎಲ್ ಕರ್ಕೆರಾರಿಗೆ ರೂ 20ಸಾವಿರ,ಅಬ್ದುಲ್ ರಹಿಮಾನ್‌ರಿಗೆ ರೂ 16,851ಸೇರಿದಂತೆ ಒಟ್ಟು ರೂ 7,13,616 ಬಿಡುಗಡೆಯಾಗಿದೆ ಎಂದು ಮೊಯ್ದಿನ್ ಬಾವ ತಿಳಿಸಿದ್ದಾರೆ.
Next Story





