ಸುಳ್ಯ: ಬೈಕ್ ಸವಾರನ ಮೇಲೆ ಎರಗಿದ ಕಾಡುಕೋಣ; ಸವಾರ ಗಂಭೀರ
.jpg)
ಸುಳ್ಯ, ಮಾ.16:ಕಾಡುಕೋಣ ರಸ್ತೆಯಲ್ಲಿ ಸಂಚರಿಸುತ್ತಿದ ಬೈಕ್ ಮೇಳೆ ದಾಳಿ ನಡೆಸಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಮುಂಜಾನೆ ನಡೆದಿದೆ.
ಐವರ್ನಾಡಿನ ಮಡ್ತಿಲ ದೊಡ್ಡಮನೆ ಜಯದೀಪ್ ಗಾಯಗೊಂಡ ವ್ಯಕ್ತಿ.
ಜಯದೀಪ್‌ರವರು ತನ್ನ ಮನೆಯಿಂದ ಬೆಳಗ್ಗೆ ಏಳೂವರೆ ಸುಮಾರಿಗೆ ಸುಳ್ಯಕ್ಕೆ ಬೈಕ್ ನಲ್ಲಿ ಬರುತ್ತಿದ್ದಾಗ ಬೇಂಗಮಲೆಯಲ್ಲಿ ರಸ್ತೆ ದಾಟುತ್ತಿದ್ದ ಕಾಡುಕೋಣ ಬೈಕ್ ಮೇಲೆ ಎರಗಿತು. ಪರಿಣಾಮ ಅವರು ಬೈಕ್ ನಿಂದ ಎಸೆಯಲ್ಪಪಟ್ಟು ಗಂಭೀರವಾಗಿ ಗಾಐಗೊಂಡಿದ್ದಾರೆ. ಆ ದಾರಿಯಾಗಿ ಬರುತ್ತಿದ್ದ ಹರೀಶ್ ಭಟ್ ಬಾಂಜಿಕೋಡಿ ಮತ್ತಿತರರು ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದರು.
ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾದ ಜಯದೀಪ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
Next Story





