ಮಂಗಳೂರು: ಎಪ್ರಿಲ್ ನಲ್ಲಿ ಯುನೈಟೆಡ್ ಪ್ರೀಮಿಯರ್ ಲೀಗ್ ಕ್ರಿಕೆಟ್

ಮಂಗಳೂರು: ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್(ರಿ) ಫರಂಗಿಪೇಟೆ ಇದರ ಆಶ್ರಯದಲ್ಲಿ ಹಾಗೂ ನೊರ್ಥರ್ನ್ ಗ್ರೂಪ್ ದುಬೈ ಇದರ ಪ್ರಾಯೋಜಕತ್ವದಲ್ಲಿ 'ಯುನೈಟೆಡ್ ಪ್ರೀಮಿಯರ್ ಲೀಗ್ ಆಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸೀಸನ್-2' ಫರಂಗಿಪೇಟೆಯನೇತ್ರಾವಾತಿ ನದಿ ಸಮೀಪದ ಮೈದಾನದಲ್ಲಿ ಎ.8,9 ಹಾಗೂ 15,16 ರಂದು ನಡೆಯಲಿದೆ.
ವಿಜೇತ ತಂಡಕ್ಕೆ ಪ್ರಥಮ ಯುಪಿಎಲ್ ಟ್ರೋಫಿ ಮತ್ತು ನಗದು, ದ್ವಿತೀಯ ಯುಪಿಎಲ್ ಟ್ರೋಫಿ ಮತ್ತು ನಗದು ತೃತೀಯ ಮತ್ತು ಚತುರ್ಥ ಟ್ರೋಫಿ ನೀಡಿ ಗೌರವಿಸಲಾಗುವುದು. ಹಾಗೂ ಉತ್ತಮ ದಾಂಡಿಗ,ಉತ್ತಮ ಎಸೆತಗಾರ,ಉತ್ತಮ ಗೂಟ ರಕ್ಷಕ, ಪಂದ್ಯ ಶ್ರೇಷ್ಟ ಹಾಗೂ ಸರಣಿ ಶ್ರೇಷ್ಠ ಆಟಗಾರನಿಗೆ ಕ್ರಿಕೆಟ್ ಕಿಟ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದಲ್ಲದೆ ಇತರ ಹಲವಾರು ಆಕರ್ಷಕ ಬಹುಮಾನಗಳು ಆಟಗಾರರ ಪಾಲಾಗಲಿದೆ.
ಯುನೈಟೆಡ್ ಪ್ರೀಮಿಯರ್ ಲೀಗ್ ಕ್ರೀಡಾಕೂಟ ಸೀಸನ್-1ರ ಪಂದ್ಯಗಳು ಫರಂಗಿಪೇಟೆಯಲ್ಲಿ ಜರಗಿದ್ದು ಭಾರೀ ಯಶಸ್ಸು ಸಾಧಿಸಿತ್ತು.
ಈ ಕ್ರೀಡಾಕೂಟ ಲೀಗ್ ಮಾದರಿಯಲ್ಲಿ ನಡೆಯಲಿದ್ದು, 14 ತಂಡಗಳು ಸೆಣಸಾಡಲಿದೆ. ಯುಪಿಎಲ್ ಸೀಸನ್-2 ಕ್ರಿಕೆಟ್ ಆಯೋಜನೆಗೆ ಅಬ್ದುಲ್ ಗಪುರ್ ಹಸನ್,ಉಮರ್ ಫಾರುಕ್, ಆಸಿಫ್ ಮೆಲ್ಮನೆ ಅವರು ಮುಖ್ಯ ಸಲಹೆ, ಸಹಕಾರ ನೀಡಿದ್ದಾರೆ.





