ಬೈಂದೂರು: ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ಬೈಂದೂರು, ಮಾ.16: ವಿದ್ಯಾರ್ಥಿಯೊಬ್ಬಳು ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಗ್ಗರ್ಸೆ ಗ್ರಾಮದ ಮುಳುವಾಡಿಮನೆ ಎಂಬಲ್ಲಿ ಮಾ.15ರಂದು ಬೆಳಗ್ಗೆ 8:45ಗಂಟೆಯಿಂದ ಸಂಜೆ 6:30ರ ಮಧ್ಯಾವಧಿಯಲ್ಲಿ ನಡೆದಿದೆ.
ಮೃತರನ್ನು ಮಂಜುನಾಥ್ ಪೂಜಾರಿ ಎಂಬವರ ಮಗಳು, ಬೈಂದೂರು ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿ ಅಶ್ವಿನಿ(20) ಎಂದು ಗುರುತಿಸಲಾಗಿದೆ.
ಅಶ್ವಿನಿ ಮನೆಯಲ್ಲಿ ಯಾರು ಇಲ್ಲದ ವೇಳೆ 'ನನ್ನ ಸಾವಿಗೆ ನಾನೇ ಕಾರಣ ಬೇರೆ ಯಾರು ಕಾರಣರಲ್ಲ, ಜೀವ ಹಾಗೂ ಜೀವನದಲ್ಲಿ ಜಿಗುಪ್ಸೆ ಬಂದು ಬದುಕಲಿಕ್ಕೆ ಇಷ್ಟವಿಲ್ಲದೆ ಸಾಯುವ ನಿರ್ಧಾರ ಮಾಡಿದ್ದೇನೆ' ಎಂದು ಪತ್ರ ಬರೆದು ಸಹಿ ಮಾಡಿ ಮನೆಯ ಒಳಗೆ ಟೇಬಲ್ ಮೇಲೆ ಇಟ್ಟು ಮನೆಯ ಕೋಣೆಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





