ಎಸ್ಸೆಸ್ಸೆಫ್ ಉಳ್ಳಾಲ ಪೇಟೆ ಶಾಖೆ: ರಿಫಾಯೀ ಶೈಖ್ ಅನುಸ್ಮರಣೆ
.jpg)
ಉಳ್ಳಾಲ, ಮಾ.16: ಉಳ್ಳಾಲ ಪೇಟೆ ಶಾಖೆಯ ಆಶ್ರಯದಲ್ಲಿ ರಿಫಾಯೀ ಶೈಖ್ ಅನುಸ್ಮರಣಾ ಕಾರ್ಯಕ್ರಮ ಪೇಟೆ ಶಾಖಾಧ್ಯಕ್ಷ ಶಬಂ ರವರ ಅಧ್ಯಕ್ಷತೆಯಲ್ಲಿ ಫಾಶಿರ್ ಪ್ಯಾಲೇಸಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಕೋಟೆಪುರ ಶಾಖಾಧ್ಯಕ್ಷ ಮುಝಮ್ಮಿಲ್ ಉಸ್ತಾದ್ ಕೋಟೆಪುರ ದುವಾ ನೆರವೇರಿಸಿದರು. ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಎಸ್ಸೆಸ್ಸೆಫ್ ದೇರಳಕಟ್ಟೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಶಫೀರ್ ರೆಂಜಾಡಿ ತರಗತಿ ನಡೆಸಿದರು.
ಮುಖ್ಯ ಅತಿಥಿಗಳಾಗಿ ಉಳ್ಳಾಲ ಸೆಕ್ಟರ್ ಕೋಶಾಧಿಕಾರಿ ಶಬೀರ್ ಪೇಟೆ, ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕೋಶಾಧಿಕಾರಿ ಇಸಾಕ್ ರಹ್ಮಾನಿಯ ಪೇಟೆ, ಸೆಕ್ಟರ್ ಜೊತೆ ಕಾರ್ಯದರ್ಶಿ ಹಫೀಝ್ ಬೊಟ್ಟು, ಮುಕ್ಕಚ್ಚೇರಿ ಶಾಖಾಧ್ಯಕ್ಷ ಅಹ್ಸನ್, ಅಕ್ಕರೆಕೆರೆ ಶಾಖಾಧ್ಯಕ್ಷ ಸಿರಾಜುದ್ದೀನ್ ಭಾಗವಹಿಸಿದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಪೇಟೆ ಶಾಖಾ ಕಾರ್ಯಕರ್ತರು ಉಪಸ್ಥಿತರಿದ್ದರು.
Next Story





