ನಾಮ್ ಹತ್ಯೆ: ಉತ್ತರ ಕೊರಿಯನ್ನರಿಗೆ ಇಂಟರ್‌ಪೋಲ್ ನೋಟಿಸ್

ಕೌಲಾಲಂಪುರ, ಮಾ. 16: ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಸಹೋದರ ಕಿಮ್ ಜಾಂಗ್ ನಾಮ್ ಹತ್ಯೆಗೆ ಸಂಬಂಧಿಸಿ ನಾಲ್ವರು ಉತ್ತರ ಕೊರಿಯನ್ನರ ವಿರುದ್ಧ ಇಂಟರ್‌ಪೋಲ್ ‘ಕೆಂಪು ನೋಟಿಸ್’ ಹೊರಡಿಸಿದೆ.
‘‘ನಾಲ್ವರು ಶಂಕಿತರಿಗಾಗಿ ಇಂಟರ್‌ಪೋಲ್ ಮೂಲಕ ನಾವು ಲಿಖಿತ ಕೆಂಪು ನೋಟಿಸ್‌ಗಳನ್ನು ಹೊರಡಿಸಿದ್ದೇವೆ. ಅವುಗಳನ್ನು ಇಂಟರ್‌ಪೋಲ್ ಮೂಲಕ ಜಾರಿಗೊಳಿಸುವುದನ್ನು ಎದುರು ನೋಡುತ್ತಿದ್ದೇವೆ’’ ಎಂದು ಮಲೇಶ್ಯ ಪೊಲೀಸ್ ಮುಖ್ಯಸ್ಥ ಖಾಲಿದ್ ಅಬುಬಕರ್ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
Next Story





