‘ಕೃಷಿ-ತೋಟಗಾರಿಕೆಯಲ್ಲಿ ಹೊಸ ಆವಿಷ್ಕಾರ ಅಗತ್ಯ’

ಚಿಕ್ಕಮಗಳೂರು, ಮಾ.16: ಕೃಷಿ- ತೋಟಗಾರಿಕಾ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರ, ಪದ್ಧತಿ ಆಚರಣೆಗೆ ತಂದರೆ ಹೆಚ್ಚಿನ ಇಳುವರಿ ಸಹಿತ ರೈತರು ಅಧಿಕ ಲಾಭಗಳಿಸಬಹುದು ಎಂದು ಎಸ್ಪಿ ಕೆ. ಅಣ್ಣಾಮಲೈ ಹೇಳಿದರು.
ಅವರು ಕರ್ನಾಟಕ ಪ್ಲಾಂಟರ್ ಅಸೋಸಿಯೇಷನ್ ಎಮ್ಮೆದೊಡ್ಡಿಯ ವಿಜಯಶ್ರೀ ಪ್ಲಾಂಟೇಷನ್‌ನಲ್ಲಿ ಹಮ್ಮಿಕೊಂಡಿದ್ದ ಮಿಶ್ರ ಬೆಳೆಯ ತೋಟ ವೀಕ್ಷಣೆ ನಂತರ ನಡೆದ ವೈಜ್ಞಾನಿಕ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.
ಆಯಾ ಪ್ರದೇಶದ ಕೃಷಿಯಲ್ಲಿ ಹಳೆಯಪದ್ಧತಿಗಳನ್ನು ಅನುಸರಿಸುವುದು ಸರ್ವೇಸಾಮಾನ್ಯ. ಹೊಸ ಪದ್ಧತಿ ಅಳವಡಿಸಿಕೊಳ್ಳುವುದು ಬಹಳಕಡಿಮೆ. ಇಲ್ಲಿ ಮಿಶ್ರಬೆಳೆಯ ವೈಜ್ಞಾನಿಕ ನಿರ್ವಹಣೆಯ ಉತ್ತಮತೋಟ ಇತರ ಬೆಳೆಗಾರರಿಗೆ ಸ್ಫೂರ್ತಿಯಾಗುತ್ತದೆ.
ಬಳಕೆ ಮಾಡಿಕೊಳ್ಳಬಹುದಾದ ಹೊಸ ಸಾಧ್ಯತೆಗಳನ್ನು ಸದಸ್ಯರಿಗೆ ಪರಿಚಯಿಸುವ ಮೂಲಕ ಕೆಪಿಎ ಉತ್ತಮ ಕಾರ್ಯ ಮಾಡಿದೆ ಎಂದರು.
ಕೆಪಿಎ ಅಧ್ಯಕ್ಷ ಡಾ. ಎಂ.ಎಂ.ಚಂಗಪ್ಪಮಾತನಾಡಿ, ವೈದ್ಯಕೀಯ ವೃತ್ತಿಯನ್ನು ತೊರೆದ ಡಾ. ವಿವೇಕ್, ಕೃಷಿ ಅವಲಂಬಿಸಿ ಬಹುಬೆಳೆಗಳನ್ನು ಬೆಳೆದು ಯಶಸ್ವಿಯಾಗಿರುವುದು ಮಾದರಿ. ವೈಜ್ಞಾನಿಕ ನಿರ್ವಹಣೆಯಿಂದ ರೈತರು ಲಾಭದಾಯಕವಾಗಿ ಮುನ್ನಡೆಯಬಹುದು. ಅತ್ಯಾಧುನಿಕ ಆವಿಷ್ಕಾರಗಳು-ಹೊಸ ಸಾಧ್ಯತೆಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವುದು ಯಶಸ್ಸಿನ ಸೂತ್ರಗಳಲ್ಲೊಂದು ಎಂದರು.
ತೋಟದ ಮಾಲಕ ಡಾ. ವಿವೇಕ್, ಸಾಂಬರ ಮಂಡಳಿಯ ಸಹಾಯಕ ನಿರ್ದೇಶಕ ಡಾ. ಎಂ.ವೈ.ಹೊನ್ನೂರ, ಮೋದಿಕೇರ್‌ನ ಭಾಸ್ಕರ್‌ಎಂ. ಮೂಡಲ್ಗಿರಿ, ಒಆರ್‌ಬಿ ಎನರ್ಜಿಯ ಉಪಾಧ್ಯಕ್ಷ ನಿತ್ಯಾನಂದಶೆಟ್ಟಿ, ಜಾರ್ಜ್ ಇರಿಗೇಶನ್‌ನ ಆಡಳಿತ ಪಾಲುದಾರ ಪ್ರಶಾಂತ್ ಡಿಕಾಸ್ಟ, ಮೆಂಟಲ್‌ಲ್ಯಾಬ್ ನಿರ್ದೇಶಕ ಸ್ವಪ್ನಲ್ ಬೇರಕರ್ ಕೆಪಿಎ ಉಪಾಧ್ಯಕ್ಷ ಎಚ್.ಟಿ.ಪ್ರಮೋದ್, ಮಾಜಿಅಧ್ಯಕ್ಷ ಎ.ಎಸ್. ಶಂಕರೇಗೌಡ, ಯೋಜನಾ ನಿರ್ದೇಶಕರಾದ ವಿಜೇಂದ್ರ, ಶಿರೀಶ್, ಮಹೇಶ್ ಶಶಿಧರ್, ರಾಮನಾಥನ್, ಹಳೇಕೋಟೆ ರಮೇಶ್, ವಿವೇಕಪುಣ್ಯಮೂರ್ತಿ, ಕೆಪಿಎ ಕಾರ್ಯದರ್ಶಿ ಅನಿಲ್ ಸವೂರ್ ಮತ್ತಿತರರಿದ್ದರು.







