ಜೀಪ್ ಪಲ್ಟಿ: ಇಬ್ಬರ ಮೃತ್ಯು

ಮಡಿಕೇರಿ ಮಾ.16: ಕಾರ್ಮಿಕರನ್ನು ಸಾಗಿಸುತ್ತಿದ್ದ ಜೀಪ್ ಪಲ್ಟಿಯಾದ ಪರಿಣಾಮ ಚಾಲಕ ಸೇರಿ ಇಬ್ಬರು ಸಾವನಪ್ಪಿರುವ ಘಟನೆ ಕುಟ್ಟ-ಗೋಣಿಕೊಪ್ಪರಸ್ತೆಯ ಕಾಕೂರು ಎಂಬಲ್ಲಿ ಗುರುವಾರ ನಡೆದಿದೆ. ಜೀಪು ಚಾಲಕ ಕೇರಳದ 6ನೆ ಪಾರೆ ನಿವಾಸಿ ಅಜೇಶ್ (26) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಪ್ರಯಾಣಿಕ ಸಿನೋಜ್(32) ಮಾನಂದವಾಡಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಸುಮಾರು 12 ಮಂದಿ ಗಾಯಗೊಂಡಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಳಗ್ಗೆ 9ಗಂಟೆಯ ಸುಮಾರಿಗೆ ಕೇರಳದಿಂದ ಬರುತ್ತಿದ್ದ ಜೀಪ್ ಮಗುಚಿಬಿದ್ದಿದೆ. ಪರಿಣಾಮ ಚಾಲಕ ಅಜೇಶ್ ವಾಹನದ ಕೆಳಗೆ ಸಿಲುಕಿಕೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದರು. ಗಂಭೀರವಾಗಿ ಗಾಯಗೊಂಡವರನ್ನು ಕುಟ್ಟ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಮಾನಂದವಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳಿದವರು ಕುಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





