ವ್ಯಕ್ತಿಯ ಕೊಲೆ: ಪ್ರಕರಣ ದಾಖಲು
ದಾವಣಗೆರೆ, ಮಾ.16: ಇಲ್ಲಿನ ಬನಶಂಕರಿ ಬಡಾವಣೆಯಲ್ಲಿ ವ್ಯಕ್ತಿ ಯೋರ್ವನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿರುವ ಘಟನೆ ನಡೆದಿದೆ. ಹಾಲೇಶ್ (35) ಎಂಬಾತ ಕೊಲೆಯಾದ ವ್ಯಕ್ತಿ. ಕೆಟಿಜೆ ನಗರ ನಿವಾಸಿಯಾಗಿರುವ ಹಾಲೇಶ್ ಮತ್ತು ಆತನ ಸೇಹಿತರ ನಡುವೆ ಹಣಕಾಸಿನ ವಿಚಾರವಾಗಿ ಜಗಳ ನಡೆದಿದ್ದು, ವಿಕೋಪಕ್ಕೆ ತಿರುಗಿ, ಹಾಲೇಶನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಪರಾರಿಯಾಗಿದ್ದಾರೆ. ಗುರುವಾರ ಬೆಳಗ್ಗೆ ಹಾಲೇಶ್‌ನ ಮೃತ ದೇಹ ಬನಶಂಕರಿ ಬಡಾವಣೆಯ ಖಾಲಿನಿವೇಶನದಲ್ಲಿ ಪತ್ತೆಯಾಗಿತ್ತು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಎಸ್. ಗುಳೇದ್, ಎ ಎಸ್ಪಿ ಯಶೋದಾ ವಂಟಗೋಡಿ ಹಾಗೂ ವಿದ್ಯಾನಗರ ಪಿಎಸ್ಸೈ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





