ಉಡುಪಿ: ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ದಿನಾಚರಣೆ

ಉಡುಪಿ, ಮಾ.16: ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗ ಉಡುಪಿ ಶಾಖೆಯ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಇತ್ತೀಚೆಗೆ ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅಥಿತಿಯಾಗಿ ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟದ ಕಾರ್ಯ ದರ್ಶಿ ವಾಸಂತಿ ರಾವ್ ಕೊರಡ್ಕಲ್ ಮಹಿಳೆಯರ ಹೊಣೆಗಾರಿಕೆಗಳು ವಿಷಯದ ಕುರಿತು ಮಾತನಾಡಿದರು. ಜಮಾಅತೆ ಇಸ್ಲಾಮೀ ಹಿಂದ್‌ನ ಸದಸ್ಯೆ ಶಮೀರಾ ಜಹಾನ್ ಅಧ್ಯಕ್ಷತೆ ವಹಿಸಿದ್ದರು.
ಸ್ಥಾನಿಯ ಸಂಚಾಲಕಿ ಶಾಹಿದಾ ರಿಯಾಝ್ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಸುರಯ್ಯಾ ಶರೀಫ್ ಕುರ್‌ಆನ್ ಪಠಿಸಿದರು. ಜಿಲ್ಲಾ ಸಂಚಾಲಕಿ ಹುಮೈರಾ ಕಾರ್ಕಳ ಉಪಸ್ಥಿತರಿದ್ದರು. ಶಾಹಿಲಾ ಹನೀಫ್ ವಂದಿಸಿದರು. ವಾಜಿದಾ ತಬಸ್ಸುಮ್ ಕಾರ್ಯಕ್ರಮ ನಿರೂಪಿಸಿದರು.
Next Story





