ಪಿಲಿಕುಳ ಉದ್ಯಾನವನಕ್ಕೆ ಬಂದ ಮುದ್ದಾದ ಅತಿಥಿ ಯಾರು ಗೊತ್ತೇ...?

ಮಂಗಳೂರು, ಮಾ.16: ಪಿಲಿಕುಳ ದ ಡಾ.ಶಿವರಾಮ ಕಾರಂತ ಉದ್ಯಾನವನದ ವನ್ಯಜೀವಿಗಳ ಕುಟುಂಬಕ್ಕೆ ನೂತನ ಸದಸ್ಯರೊಬ್ಬರು ಇಂದು ಸೇರ್ಪಡೆಗೊಂಡಿದ್ದಾರೆ.
ಉದ್ಯಾನವನಗಳ ನಡುವೆ ವನ್ಯಜೀವಿಗಳ ವಿನಿಮಯ ಕಾರ್ಯಕ್ರಮದಡಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ 10 ವರ್ಷ ಪ್ರಾಯದ ಗಂಡು ನೀರಾನೆ ಗುರುವಾರ ಪಿಲಿಕುಳಕ್ಕೆ ಆಗಮಿಸಿದೆ.
ಮುಂದಿನ ವಾರ ಎರಡು ಹೆಣ್ಣು ನೀರಾನೆಗಳ ಜತೆ ಇನ್ನಷ್ಟು ಇತರ ಸದಸ್ಯರು ಪಿಲಿಕುಳ ಕ್ಕೆ ಆಗಮಿಸಲಿದ್ದಾರೆ. ಇದೇ ವೇಳೆ ಪಿಲಿಕುಳದಿಂದ ಬಂಗಾಲಿ ಹುಲಿ ಸೇರಿದಂತೆ ಕೆಲ ವನ್ಯಜೀವಿಗಳು ಬನ್ನೇರುಘಟ್ಟ ಉದ್ಯಾನವನಕ್ಕೆ ರವಾನೆಯಾಗಲಿವೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.
Next Story





