ಉಡುಪಿ: ಲಲಿತಕಲಾ ಸ್ಪರ್ಧೆ ಉದ್ಘಾಟನೆ

ಉಡುಪಿ, ಮಾ.16: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕಲ್ಯಾಣ ಪುರ ಮಿಲಾಗ್ರಿಸ್ ಕಾಲೇಜು ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸ ಲಾದ ಲಲಿತಕಲಾ ಸ್ಪರ್ಧೆಯನ್ನು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ವಾಮನ್ ಪಡುಕೆರೆ ಉದ್ಘಾಟಿಸಿದರು.
ಹಣ ಸಂಪಾದಿಸುವ ವೇಗದ ಬದುಕಿನಲ್ಲಿ ಮನುಷ್ಯ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಅನಾದಿಕಾಲದಿಂದಲೂ ಮನುಷ್ಯ ವಿವಿಧ ಕಲೆಗಳನ್ನು ರೂಡಿಸಿಕೊಂಡು ಬದುಕಿನ ನೆಮ್ಮದಿಯನ್ನು ಕಂಡುಕೊಂಡಿರುವುದನ್ನು ಮರೆ ಯಬಾರದು ಎಂದು ವಾಮನ ಪಡುಕೆರೆ ಹೇಳಿದರು.
ಮುಖ್ಯ ಅತಿಥಿಯಾಗಿ ಕಲಾವಿದ ಜಯವಂತ ಮಣಿಪಾಲ್ ಮಾತನಾಡಿ. ಯಾವುದೇ ಕಲೆಯನ್ನು ಆಸ್ವಾದಿಸಲು ಸುಸಂಸ್ಕೃತವಾದ ಮನಸ್ಸು ಅತಿಅಗತ್ಯ ಎಂದು ತಿಳಿಸಿದರು. ಇದೇ ಸಂದಭರ್ದಲ್ಲಿ ಆರೂರು ಮಂಜು ಕುಲಾಲ್ ಅವರನ್ನು ಸನ್ಮಾನಿಸಾಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು. ಡಾ.ಜಯರಾಮ್ ಶೆಟ್ಟಿಗಾರ್ ಉಪಸ್ಥಿತರಿದ್ದರು. ಶ್ರೀನಿಧಿ ಸ್ವಾಗತಿಸಿದರು. ಜೋಶ್ವಾ ವಂದಿಸಿದರು. ಪಾವನ ಕಾರ್ಯಕ್ರಮ ನಿರೂಪಿಸಿದರು.
Next Story





