ಮಧ್ಯ ಪ್ರದೇಶ: ಕರ್ತವ್ಯದಲ್ಲೇ ಪೊಲೀಸರ ಪಾನಗೋಷ್ಠಿ!
ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್

ಭೋಪಾಲ್ ಮಾ.17: ಕೆಲವೊಮ್ಮೆ ಮೋಜು, ಮಸ್ತಿ ತಪ್ಪಲ್ಲ; ಆದರೆ ಕಾನೂನು ಜಾರಿಯ ಹೊಣೆ ಹೊತ್ತವರೇ, ಕಾನೂನು ಉಲ್ಲಂಘಿಸಿವುದು ನಿಜಕ್ಕೂ ನಾಚಿಕೆಗೇಡು. ಪೊಲೀಸರು ಕರ್ತವ್ಯದಲ್ಲಿರುವಾಗಲೇ ಬಿಯರ್ ಸೇವಿಸುತ್ತಿದ್ದ ವೀಡಿಯೊ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಗ್ವಾಲಿಯರ್‌ನ ಈ ಪೊಲೀಸರನ್ನು ಅಮಾನತು ಮಾಡಲಾಗಿದೆ.
ಚಾವ್ನಿ ಪೊಲೀಸ್ ಠಾಣೆಯಲ್ಲಿ ಹೋಳಿಹಬ್ಬದ ಮರುದಿನ ಪಾನಗೋಷ್ಠಿ ನಡೆಸಿದ ಆರೋಪದಲ್ಲಿ ಇಬ್ಬರು ಎಎಸ್‌ಐಗಳು ಸೇರಿದಂತೆ 15 ಪೊಲೀಸರನ್ನು ಗ್ವಾಲಿಯರ್ ಎಸ್ಪಿ ಅಮಾನತು ಮಾಡಿದ್ದಾರೆ.
ಎಎನ್‌ಐ ಟ್ವಿಟ್ಟರ್‌ನಲ್ಲಿ ಈ ಕುರಿತ ವೀಡಿಯೊ ತುಣುಕು ಪೋಸ್ಟ್ ಮಾಡಿದ್ದು, ಇದರಲ್ಲಿ ಸಮವಸ್ತ್ರದಲ್ಲಿದ್ದ ಕೆಲ ಪೊಲೀಸ್ ಅಧಿಕಾರಿಗಳು ಹಾಗೂ ಇತರರು ಹೋಲಿ ಬಣ್ಣ ಎರಚಾಡಿಕೊಂಡು ಮದ್ಯಪಾನ ಮಾಡುತ್ತಿದ್ದರು. ಬೇರೆಯವರಿಗೆ ಪೊಲೀಸ್ ಅಧಿಕಾರಿಯೇ ಒತ್ತಾಯಪೂರ್ವಕವಾಗಿ ಬಿಯರ್ ಕುಡಿಸುತ್ತಿರುವುದು ಕೂಡ ವೀಡಿಯೊದಲ್ಲಿ ಸೆರೆಹಿಡಿಯಲ್ಪಟ್ಟಿತ್ತು.
#CaughtonCam Policemen drinking beer inside a Police station in Madhya Pradesh's Gwalior. (14.3.17) pic.twitter.com/tYW9F0GvCX
— ANI (@ANI_news) March 16, 2017