ನಿಗೂಢವಾಗಿ ಸಾವಿಗೀಡಾದ 10ವರ್ಷದ ಬಾಲಕಿ ನಿರಂತರ ಲೈಂಗಿಕ ಕಿರುಕುಳಕೊಳಗಾಗಿದ್ದಳು!: ವೈದ್ಯರ ಹೇಳಿಕೆ

ಕೊಲ್ಲಂ,ಮಾ. 17: ಕೇರಳದ ಕುಂಡರ ಎಂಬಲ್ಲಿ ನಿಗೂಢವಾಗಿ ಮೃತಪಟ್ಟ ಹತ್ತುವರ್ಷದ ಬಾಲಕಿಯನ್ನು ನಿರಂತರ ಲೈಂಗಿಕ ಕಿರುಕುಳಕ್ಕೆ ಗುರಿಪಡಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಮೃತದೇಹವನ್ನು ಪೋಸ್ಟ್‌ಮಾರ್ಟಂ ಮಾಡಿದ ವೈದ್ಯ ಡಾ. ಕೆ. ವತ್ಸಲಾ ನೀಡಿದ ಹೇಳಿಕೆ ಇದು. ಮೃತಪಡುವುದಕ್ಕಿಂತ ಮೂರು ದಿವಸ ಹಿಂದಿನವರೆಗೂ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗಿತ್ತು ಎಂದು ವ್ಯದ್ಯೆ ತಿಳಿಸಿದ್ದಾರೆ. ನಿಕಟ ಸಂಬಂಧಿಕರ ಲೈಂಗಿಕ ಶೋಷಣೆಯಿಂದ ನಲುಗಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರು ಭಾವಿಸಿದ್ದಾರೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದ ಒಂಬತ್ತು ಮಂದಿ ಆರೋಪಿಗಳನ್ನು 24 ಗಂಟೆ ಪೊಲೀಸ್ ಕಸ್ಟಡಿಯಲ್ಲಿಟ್ಟು ವಿಚಾರಿಸಿದರೂ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಇದೇವೇಳೆ ಪ್ರಕರಣವನ್ನು ಬುಡಮೇಲುಗೊಳಿಸಲು ಸಹಕರಿಸಿದ ಕೊಲ್ಲಂನ ಗ್ರಾಮೀಣ ಎಸ್ಪಿ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್‌ಬಲವಾದ ಪ್ರತಿಭಟನೆಗಿಳಿದಿದೆ. ನಿನ್ನೆಯ ಪ್ರತಿಭಟನೆಯಲ್ಲಿ ಯೂತ್ ಕಾಂಗ್ರೆಸ್‌ಕಾರ್ಯಕರ್ತರಿಗೆ ಪೊಲೀಸರ ಕ್ರೂರ ಹೊಡೆತ ಬಿದ್ದಿದೆ. ಜೊತೆ ಗೆ ಇಂದು ಹರತಾಳ ನಡೆಯುತ್ತಿದೆ.





