ಟ್ರಂಪ್‌ರ ಮಾಜಿ ಪತ್ನಿಯಿಂದ ಪುಸ್ತಕ ಬಿಡುಗಡೆಗೆ ಸಿದ್ಧತೆ

ವಾಷಿಂಗ್ಟನ್, ಮಾ. 17: ಮಕ್ಕಳನ್ನು ಬೆಳೆಸುವುದರ ಕುರಿತ ನೆನಪುಗಳಿರುವ ಪುಸ್ತಕವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಪತ್ನಿ ಇವಾನ ಬಿಡುಗಡೆಗೊಳಿಸುವ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಪ್ರಕಾಶನ ಸಂಸ್ಥೆ ಗ್ಯಾಲರಿ ಬುಕ್ಸ್ ತಿಳಿಸಿದೆ. ಇವಾನ ತನ್ನ ಪುಸ್ತಕಕ್ಕೆ ರೈಸಿಂಗ್ ಟ್ರಂಪ್ ಎಂದು ಹೆಸರಿಟ್ಟಿದ್ದಾರೆ. ಇದರಲ್ಲಿ ಮಾತೃತ್ವ, ಶಕ್ತಿ, ಬದಲಾವಣೆ ಸಹಿತ ಅನೇಕ ವಿಷಯಗಳನ್ನು ಇವಾನ ಚರ್ಚಿಸಿದ್ದಾರೆ. ರಾಜಕೀಯ ಕುರಿತು ಪ್ರಸ್ತಾವಗಳಿಲ್ಲ ಎಂದು ಗ್ಯಾಲರಿ ಬುಕ್ಸ್ ಹೇಳಿದೆ.
ಟ್ರಂಪ್‌ರ ಹಿರಿಯ ಮಕ್ಕಳು ಡೊನಾಲ್ಡ್ ಜೂನಿಯರ್, ಇವಾಂಕ, ಎರಿಕ್ ಇವರನ್ನು ತಾನು ಬೆಳೆಸಿದ ನೆನಪುಗಳನ್ನು ಇವಾನ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಸುಳ್ಳು ಹೇಳಬಾರದು, ಕಳ್ಳತನ ವಂಚನೆ ಮಾಡಬಾರದು, ಇತರರನ್ನು ಗೌರವಿಸಬೇಕು, ಒಂದು ಡಾಲರ್‌ನ ಬೆಲೆಯನ್ನು ಕೂಡಾ ಅರ್ಥಮಾಡಿಕೊಳ್ಳಬೇಕು ಎಂದು ಮಕ್ಕಳಿಗೆ ನೀಡಿದ ಪಾಠಗಳಾಗಿವೆ ಎಂದು ಇವಾನ ತನ್ನ ತಾಯ್ತನದ ಅನುಭವಗಳನ್ನೂ ವಿವರಿಸಿದ್ದಾರೆ. ಅಮ್ಮ ನಮ್ಮ ಅಧ್ಯಾಪಕಿ ಮತ್ತು ಪ್ರೇರಣೆಯಾಗಿದ್ದಾರೆಂದು ಇವಾನರ ಮೂವರು ಮಕ್ಕಳು ಹೇಳಿದ್ದಾರೆ. ರೂಪದರ್ಶಿಯಾಗಿದ್ದ ಇವಾನಾ 1979ರಲ್ಲಿ ಟ್ರಂಪ್‌ರನ್ನು ಮದುವೆಯಾಗಿದ್ದರು.





