ಬೊಳ್ಳೂರು: ಸಮಸ್ತ ಅಗಲಿದ ನೇತಾರರ ಅನುಸ್ಮರಣೆ ಕಾರ್ಯಕ್ರಮ

ಹಳೆಯಂಗಡಿ, ಮಾ.17: ಎಸ್ಕೆಎಸ್ಸೆಸ್ಸೆಫ್ ಬೊಳ್ಳೂರು ಘಟಕದ ಆಶ್ರಯದಲ್ಲಿ ಸಮಸ್ತ ಅಗಲಿದ ನೇತಾರರ ಅನುಸ್ಮರಣೆ ಹಾಗೂ ಆಧ್ಯಾತ್ಮಿಕ ಮಜ್ಲಿಸುನ್ನೂರ್ ಸಂಗಮ ಕಾರ್ಯಕ್ರಮವು ಹಳೆಯಂಗಡಿಯ ಬೊಳ್ಳೂರಿನ ಮರ್ಹೂಂ ಕೂಟುಮಲ ಬಾಪು ಉಸ್ತಾದ್ ವೇದಿಕೆಯಲ್ಲಿ ಜರಗಿತು ಗುರುವಾರ ನಡೆಯಿತು.
ಹನೀಫ್ ಐ.ಎ.ಕೆ. ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಮಸ್ತ ದಕ್ಷಿಣ ಕರ್ನಾಟಕ ಮುಶಾವರ ಸದಸ್ಯ ಶೈಖುನಾ ಬೊಳ್ಳೂರು ಉಸ್ತಾದ್ ಉದ್ಘಾಟಿಸಿದರು. ಬಹು. ಯು.ಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಪ್ರಸ್ತಾವಿಕ ಭಾಷಣ ಮಾಡಿದರು.
ಯು.ಕೆ.ಮುಹಮ್ಮದ್ ಹನೀಫ್ ನಿಝಾಮಿ ಕಾಸರಗೋಡು ಮುಖ್ಯಭಾಷಣಗೈದರು. ಮಜ್ಲಿಸುನ್ನೂರ್ ಸಂಗಮದ ನೇತೃತ್ವವನ್ನು ಅಸ್ಸೈಯದ್ ಜುನೈದ್ ಜಿಫ್ರಿ ತಂಙಳ್ ಆತೂರು ವಹಿಸಿ ದುಆ ನೆರೆವೇರಿಸಿದರು.
ಮುಖ್ಯ ಅತಿಥಿಗಳಾಗಿ ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ, ಕೋಶಾಧಿಕಾರಿ ಹಾಜಿ ಜಲೀಲ್ ಬದ್ರಿಯಾ, ಬೊಳ್ಳೂರು ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ಫೈಝಿ ಕಡಬ, ಇಸ್ಮಾಯೀಲ್ ದಾರಿಮಿ ಸಂತೆಕಟ್ಟೆ, ಬೊಳ್ಳೂರು ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಎ.ಕೆ.ಜೀಲಾನಿ, ಕಾರ್ಯದರ್ಶಿ ಬಿ.ಎಂ.ಸುಲೈಮಾನ್, ಮಾಜಿ ಕಾರ್ಯದರ್ಶಿ ಹಾಜಿ ಅಬ್ದುಲ್ ಖಾದರ್ ಐ.ಎ.ಕೆ., ಹಳೆಯಂಗಡಿ ಗ್ರಾಪಂ ಸದಸ್ಯರಾದ ಎಂ.ಅಬ್ದುಲ್ ಖಾದರ್ ಹಾಗೂ ಅಝೀಝ್ ಐ.ಎ.ಕೆ. ಬೊಳ್ಳೂರು, ಎಸ್ಕೆಎಸ್ಸೆಸ್ಸೆಫ್ ಸುರತ್ಕಲ್ ವಲಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಹೈದರ್ ಮುಸ್ಲಿಯಾರ್, ಹಾಜಿ ಪಂಡಿತ್ ಬಿ.ಎ. ಇದಿನಬ್ಬ ತೋಡಾರ್, ಬಶೀರ್ ಐ.ಎ.ಕೆ., ಯೂಸುಫ್ ಇಂದಿರಾ ನಗರ, ಇಸ್ಮಾಯೀಲ್ ಕೊಲ್ನಾಡು, ಅಬ್ದುಲ್ ಖಾದರ್, ಹನೀಫ್ ಇಡ್ಯಾ ಮೊದಲಾವದರು ಉಪಸ್ಥಿತರಿದ್ದರು.
.ಜಿ.ಎಂ.ದಾರಿಮಿ ಸ್ವಾಗತಿಸಿದರು.







