ಸಾವಿನ ಮನೆಯಲ್ಲಿ ಕಾಳಗ: ಓರ್ವನ ಸಾವಿನಲ್ಲಿ ಅಂತ್ಯ
.jpg)
ಕೊಡಕ್ಕರ, ಮಾ.17: ಕೇರಳದ ತೃಶೂರ್ ಎಂಬಲ್ಲಿ ಸಾವು ಸಂಭವಿಸಿದ ಮನೆಯಲ್ಲಿ ಜಗಳ ನಡೆದು, ಪತ್ನಿ ಸಹೋದರನ ಇರಿತಕ್ಕೆ ಸಿಲುಕಿ ಚೆಂಬಾಟ್ಟ್ ರಾಜನ್(49) ಎನ್ನುವ ಮಧ್ಯವಯಸ್ಕರು ಮೃತಪಟ್ಟಿದ್ದಾರೆ. ಪತ್ನಿತಮ್ಮ ಗೋಪಾಲಕೃಷ್ಣ (47) ನನ್ನುಪೊಲೀಸರು ಬಂಧಿಸಿದ್ದಾರೆ. ಘಟನೆ ಬುಧವಾರ ಮಧ್ಯರಾತ್ರಿಯಲ್ಲಿ ನಡೆದಿತ್ತು.
ಪತ್ನಿಸುಜಾತರ ಅಮ್ಮ ನಿಧನರಾದ್ದರಿಂದ ರಾಜನ್ ಕುಟುಂಬಸಮೇತ ತೆಶ್ಶೇರಿಗೆ ಬಂದಿದ್ದರು. ರಾತ್ರಿ ಗೋಪಾಲಕೃಷ್ಣ ತನ್ನ ಸಹೋದರಿಯರ ಕುರಿತು ತಾಯಿಮೃತದೇಹದ ಬಳಿ ಕುಳಿತು ಅವಾಚ್ಯವಾಗಿ ಕೂಗಾಡಿದ್ದಾನೆ. ರಾಜನ್ ಈತನನ್ನು ಮೃತದೇಹದ ಸಮೀಪದಿಂದ ದೂರ ಕರೆದೊಯ್ಯಲು ಪ್ರಯತ್ನಿಸಿದರು. ಈ ನಡುವೆ ಇಬ್ಬರಲ್ಲಿ ವಾಗ್ವಾದ ಆರಂಭವಾಗಿತ್ತು. ಗೋಪಾಲಕೃಷ್ಣ ಬಾವ ರಾಜನ್‌ರನ್ನು ದೂಡಿ ಹಾಕಿ ತುಳಿದುನಂತರ ವರಾಂಡದಿಂದ ಕುಡುಗೋಲು ತಂದು ಹೊಟ್ಟೆಗೆ ತಿವಿದಿದ್ದಾನೆ.
Next Story





