ಮಾಕ್ಸ್‌ವೆಲ್ ಬ್ಯಾಟ್ ಮುರಿದ ಯಾದವ್

ರಾಂಚಿ, ಮಾ.17: ಇಲ್ಲಿ ನಡೆಯುತ್ತಿರುವ ಮೂರನೇ ಕ್ರಿಕೆಟ್ ಟೆಸ್ಟ್‌ನ ಎರಡನೇ ದಿನ ಭಾರತದ ವೇಗಿ ಉಮೇಶ್ ಯಾದವ್ ಎಸೆತದಲ್ಲಿ ಆಸ್ಟ್ರೇಲಿಯದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟ್ ಎರಡು ತುಂಡಾಗಿದೆ.
ನಾಯಕ ಸ್ಮಿತ್ ಜೊತೆ ಎರಡನೆ ದಿನದ ಆಟ ಮುಂದುವರಿಸಿದ ಮ್ಯಾಕ್ಸ್‌ವೆಲ್ ಅವರು ಉಮೇಶ್ ಯಾದವ್‌ರ ಮೊದಲ ಓವರ್‌ನ ಮೊದಲ ಎಸೆತದಲ್ಲಿ ಚೆಂಡನ್ನು ರಕ್ಷಣಾತ್ಮವಾಗಿ ಎದುರಿಸುವಾಗ ಬ್ಯಾಟ್ ತುಂಡಾಗಿ ಒಂದು ಕ್ಷಣ ಆಘಾತಕ್ಕೊಳಗಾದದಯ. ಬಳಿಕ ಚೇತರಿಸಿಕೊಂಡು ಬೇರೆ ಬ್ಯಾಟ್ ಸಹಾಯದಿಂದ ಬ್ಯಾಟಿಂಗ್ ಮುಂದುವರಿಸಿ ಚೊಚ್ಚಲ ಶತಕ ಪೂರ್ಣಗೊಳಿಸಿದರು.
ಗಂಟೆಗೆ 140 ಕಿ.ಮಿ ವೇಗದಲ್ಲಿ ಹಾರಿ ಬಂದ ಉಮೇಶ್ ಯಾದವ್ ಚೆಂಡನ್ನು ಮ್ಯಾಕ್ಸ್ ವೆಲ್ ತಡೆದಾಗ ಅವರ ಬ್ಯಾಟ್ ಎರಡು ತುಂಡಾಗಿದೆ. ಮ್ಯಾಕ್ಸ್‌ವೆಲ್ ಕೈಯಲ್ಲಿದ್ದ ಬ್ಯಾಟ್ ತುಂಡಾಗಿ ಕೆಳಗೆ ಬಿತ್ತು. ಬ್ಯಾಟ್‌ನ ಹಿಡಿ ಮಾತ್ರ ಮ್ಯಾಕ್ಸ್‌ವೆಲ್ ಕೈಯಲ್ಲಿ ಉಳಿಯಿತು. ಅದೃಷ್ಟವಶಾತ್ ಚೆಂಡು ದೂರಕ್ಕೆ ಹಾರಿತು.ಯಾವುದೇ ಅನಾಹುತ ಉಂಟಾಗಲಿಲ್ಲ.
Next Story







