Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರು: ಮಾ.19ರಂದು ದಕ್ಷಿಣ ಭಾರತದ...

ಮಂಗಳೂರು: ಮಾ.19ರಂದು ದಕ್ಷಿಣ ಭಾರತದ ಅತ್ಯಂತ ಎತ್ತರದ 'ಭಂಡಾರಿ ವರ್ಟಿಕಾ' ವಸತಿ ಸಮುಚ್ಛಯ ಕಾಮಗಾರಿಗೆ ಚಾಲನೆ

ವಾರ್ತಾಭಾರತಿವಾರ್ತಾಭಾರತಿ17 March 2017 7:34 PM IST
share
ಮಂಗಳೂರು: ಮಾ.19ರಂದು ದಕ್ಷಿಣ ಭಾರತದ ಅತ್ಯಂತ ಎತ್ತರದ ಭಂಡಾರಿ ವರ್ಟಿಕಾ ವಸತಿ ಸಮುಚ್ಛಯ ಕಾಮಗಾರಿಗೆ ಚಾಲನೆ

ಮಂಗಳೂರು,ಮಾ.17:ಭಂಡಾರಿ ಬಿಲ್ಡರ್ಸ್‌ನವರ ಮಹತ್ವಾಕಾಂಕ್ಷೆಯ ವಸತಿ ಯೋಜನೆ ದಕ್ಷಿಣ ಭಾರತದ ಅತೀ ಎತ್ತರದ 'ಭಂಡಾರಿ ವರ್ಟಿಕಾ' ವಸತಿ ಸಮುಚ್ಛಯಕ್ಕೆ ಮಂಗಳೂರು ಕದ್ರಿಯ ಪಿಂಟೋಸ್ ಲೇನ್‌ನಲ್ಲಿ ಮಾರ್ಚ್ 19 ರಂದು ಸಂಜೆ 5ಗಂಟೆಗೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭಂಡಾರಿ ಬಿಲ್ಡರ್ಸ್‌ನ ಆಡಳಿತ ನಿರ್ದೇಶಕ ಲಕ್ಷ್ಮೀಶ್ ಭಂಡಾರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಪ್ರಥಮ ಬಾರಿಗೆ ವ್ಯಾಲೆಟ್ ಪಾರ್ಕಿಂಗ್ ಹೊಂದಿರುವ ವಸತಿ ಸಮುಚ್ಛಯವಾಗಿ ಭಂಡಾರಿ ವರ್ಟಿಕಾ ಮೂಡಿ ಬರಲಿದೆ.ನಗರದಲ್ಲಿ ಒಂದು ಎಕ್ರೆ ಪ್ರದೇಶದಲ್ಲಿ 250 ಮೀಟರ್ ಎತ್ತರದಲ್ಲಿ ನಿರ್ಮಾಣವಾಗಲಿರುವ ಈ ವಸತಿ ಸಮುಚ್ಛಯ 56 ಅಂತಸ್ತುಗಳನ್ನು ಹೊಂದಿದೆ.ಪ್ರತಿ ಅಂತಸ್ತುಗಳು 11 ಅಡಿ ಎತ್ತರವನ್ನು ಹೊಂದಿದೆ. 34 ಅಂತಸ್ತಿನವರೆಗೆ ಪ್ರತಿದಿಕ್ಕಿನಿಂದಲೂ ವೀಕ್ಷಿಸಲು ಅನುಕೂಲವಿರುವಂತೆ ಒಂದು ಅಂತಸ್ತಿನಲ್ಲಿ ಒಂದು ಪ್ಲಾಟ್ ನಿರ್ಮಾಣಗೊಳ್ಳಲಿದೆ.

ಉಳಿದಂತೆ ಮೇಲಿನ ಅಂತಸ್ತುಗಳಲ್ಲಿ ತಲಾ ಎರಡು ಪ್ಲಾಟ್‌ಗಳು ಮಾತ್ರ ಇರುತ್ತವೆ.ಪ್ರಥಮ ಬಾರಿಗೆ ಈ ವಸತಿ ಸಮುಚ್ಛಯದಲ್ಲಿ ಹಲವು ವಿಶೇಷ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ವಸತಿ ಸಮುಚ್ಛಯದ ಮೂರನೆ ಮಹಡಿಯಲ್ಲಿ ವಾತಾವರಣ ನಿಯಂತ್ರಿತ ಓರೊನೈಸ್ಡ್ ಸ್ವಿಮ್ಮಿಂಗ್ ಫೂಲ್, ಜಿಮ್ಮೆಶಿಯಂ, ಸ್ನೂಕರ್,ಟೇಬಲ್ ಟೆನ್ನಿಸ್, ಮಕ್ಕಳ ಆಟದ ಪ್ರಾಂಗಣ, ಸ್ಟೀಮ್ ಬಾತ್ ಆ್ಯಂಡ್ ಜಾಕುಸಿ, ಜಾಗರ್ಸ್‌ ಟ್ರಾಕ್, ಸೈಕ್ಲಿಂಗ್ ಬೇ, ಡಿಜಿಟಲ್ ಗೇಮಿಂಗ್ ರೆನ್, ರೂಫ್ ಟಾಫ್ ಪಾರ್ಟಿಹಾಲ್, ಸೆಮಟ್ರಲೈಸ್ಡ್ ಎ.ಸಿ, (ವಿಆರ್‌ಎಫ್) ಆರ್‌ಎಫ್‌ಐಡಿ ಲಿಪ್ಟ್, ಫೌಂಟೇನ್ ಯುಕ್ತ ಲ್ಯಾಂಡ್ ಸ್ಕೇಫ್ ಗಾರ್ಡ್‌ನ್, ವಾಟರ್ ಹೀಟರ್, ಸೋಲಾರ್, ಹಿಂಟ್ ಪಂಪ್, ವಿಶಾಲವಾದ ಪಾರ್ಕಿಂಗ್ ಏರಿಯಾ, ಕಾಮನ್ ಏರಿಯಾಗಳಲ್ಲಿ ಸೆನ್ಸಾರ್ ಲೈಟ್, ಸ್ಕೈ ಗಾರ್ಡ್‌ನ್, ಅಬ್ಸರ್ ವೇಶನ್ ಡೆಕ್, ನೆಟ್‌ವರ್ಕ್ ಬೂಸ್ಟರ್, ಬಾಹ್ಯ ಸೌಂದರ್ಯ ಹೆಚ್ಚಿಸಲು ಎಲ್‌ಇಡಿ ಸ್ಟ್ರಿಪ್ ಲೈಟ್, ಬಾಸ್ಕೆಟ್ ಬಾಲ್ ಮತ್ತು ಸ್ಕೇಟಿಂಗ್ ರಿಂಕ್ ಪಾರ್ಕಿಂಗ್‌ನಲ್ಲಿರುವ ಎಲೆಕ್ಟ್ರಿಕಲ್ ಕಾರುಗಳಿಗೆ ಚಾರ್ಜಿಂಗ್ ಪಾಯಿಂಟ್‌ಗಳು,ಕಾರ್ ಆ್ಯಕ್ಸೆಸ್ ಎಂಟ್ರಿ,ಬ್ಯಾಕ್ ಆಫ್ ಯುಪಿಎಸ್,ತೋಟಗಾರಿಕೆಗೆ ಆಟೋ ಮೇಟೆಡ್ ಕಂಟ್ರೋಲ್,ಹೊರಾಂಗಣದ ಲೈಟಿಂಗ್ ವ್ಯವಸ್ಥೆ ಹಾಗೂ ಎಲ್‌ಯು ಎಕ್ಸ್ ಕಂಟ್ರೋಲ್‌ನೊಂದಿಗೆ ಬಿಲ್ಡಿಂಗ್ ಲೈಟು ಇತ್ಯಾದಿ ಒಳಗೊಂಡಿದೆ.

ವಸತಿ ಸಮುಚ್ಛ ಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಜೆ.ಆರ್.ಲೋಬೊ, ಅತಿಥಿಗಳಾಗಿ ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎ.ಜೆ.ಶೆಟ್ಟಿ, ದಿ ಮಣಿಪಾಲ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೌತಮ್ ಪೈ, ನಿಟ್ಟೆ ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿ ಡಾ.ಎಂ.ಶಾಂತಾರಾಮ ಶೆಟ್ಟಿ, ಬಲ್ಲಾಳ್ ಹೊಟೇಲ್ ಗ್ರೂಫ್ ಆಫ್ ಹೊಟೇಲ್‌ಗಳ ಆಡಳಿತ ನಿರ್ದೇಶಕ ಕೆ.ಜಯವರ್ಮರಾಜ ಬಲ್ಲಾಳ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಮ್.ಎನ್.ರಾಜೇಂದ್ರ ಕುಮಾರ್, ಆಳ್ವಾಸ್ ಎಜುಕೇಶನ್ ಫೌಂಡೇಶನ್ನಿನ ಅಧ್ಯಕ್ಷ ಮೋಹನ್ ಆಳ್ವ, ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಸಚೇತಕ ಶಶಿಧರ ಹೆಗ್ಡೆ,ಮನಪಾ ಸದಸ್ಯ ಡಿ.ಕೆ.ಅಶೋಕ್, ಕ್ರೆಡೈ ಅಧ್ಯಕ್ಷ ಡಿ.ಬಿ.ಮೆಹ್ತಾ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಲಕ್ಷ್ಮೀಶ್ ಭಂಡಾರಿ ತಿಳಿಸಿದ್ದಾರೆ.

ವಿಶೇಷ ಸುರಕ್ಷಾ ವ್ಯವಸ್ಥೆ:

ಮಂಗಳೂರಿನಲ್ಲಿ ಭಂಡಾರಿ ವರ್ಟಿಕಾ ಸಮುಚ್ಛಯದ ನಿವಾಸಿಗಳಿಗೆ ಪ್ರ್ರಥಮ ಬಾರಿಗೆ ವೀಡಿಯೋ ಡೋರ್ ಪೋನ್ ವ್ಯವಸ್ಥೆ, ಮುಖ್ಯದ್ವಾರದಲ್ಲಿ ಡಿಜಿಟಲ್ ಲಾಕ್, ಇಂಟಲಿಜೆಂಟ್ ಫೈರ್ ಡಿಟೆಕ್ಷನ್ ಮತ್ತು ಸಪ್ರೆಶನ್ ಸಿಸ್ಟಮ್,ಆಟೋಮ್ಯಾಟಿಕ್ ಎಂಟ್ರೆನ್ಸ್ ಗೇಟ್, ಬಯೋಮೆಟ್ರಿಕ್ ಡಿಜಿಟಲ್ ಲಾಕ್, ಡಿಜಿಟಲ್ ಎಂಟ್ರೆನ್ಸ್ ಲಾಬಿ, 360 ಡಿಗ್ರಿ ಸಿ.ಸಿಟಿವಿ ಕವರೇಜ್ ನಿರ್ವಹಣೆಯೊಂದಿಗೆ ಇಂಟಲಿಜೆಂಟ್ ಆ್ಯಕ್ಸೆಸ್, ಇಂಟ್ರೋಷನ್ ಅಲರಾಮ್, ಭಂಡಾರಿ ವರ್ಟಿಕಾ ರೆಸಿಡೆಂಟ್ ಆ್ಯಪ್, ಜೆಪಿಎಸ್ ಟ್ರಾಕರ್ ಜಿಯೋ ಫೆನ್ಸಿಂಗ್ ಅಲಾರ್ಮ್ ಹಾಗೂ ಭದ್ರತಾ ನಿಯಂತ್ರಣಾ ಕೊಠಡಿಗಳನ್ನು ಒಳಗೊಂಡಿದೆ.

ಎರ್ಮಜೆನ್ಸಿ ಲಿಫ್ಟ್ ಇವ್ಯಾಕ್ಯುವೇಶನ್ ಮತ್ತು ಕಾರು ಪರಿಶೀಲನಾ ವ್ಯವಸ್ಥೆಯು ಹೆಚ್ಚುವರಿ ಭದ್ರತಾ ದೃಷ್ಟಿಯಿಂದ ಕೈ ಗೊಳ್ಳಲಾಗಿದೆ .ಮಕ್ಕಳು ಹೊರಗೆ ಆಟವಾಡುತ್ತಿರುವಾಗ ಅವರ ಚಲನವಲನಗಳನ್ನು ಪ್ಲಾಟ್‌ನ ಒಳಗಿದ್ದೆ ಹಿರಿಯರು ಗಮನಿಸಬಹುದಾಗಿದೆ. ಕ್ಲಬ್ ಹೌಸ್‌ನ ಮಾಹಿತಿ ಹಾಗೂ ಇತರ ಬಿಲ್‌ನ ಮಾಹಿತಿ ಮನೆಯೊಳಗಿನ ಸ್ಕ್ರೀನ್‌ನಲ್ಲಿ ನಿವಾಸಿಗಳಿಗೆ ದೊರೆಯಲಿದೆ ಎಂದು ಲಕ್ಷ್ಮೀಶ್ ಭಂಡಾರಿ ತಿಳಿಸಿದ್ದಾರೆ.

ಸಮಾರಂಭದ ಬಳಿಕ ಮನೋರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಂದು ಲಕ್ಷ್ಮೀಶ್ ಭಂಡಾರಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಭಂಡಾರಿ ಬಿಲ್ಡರ್ಸ್‌ನ ನಿರ್ದೇಶಕಿ ನಿಖಿತಾ ಎಲ್ ಭಂಡಾರಿ, ಭಂಡಾರಿ ಬಿಲ್ಡರ್ಸ್‌ನ ಸಿಇಒ ವೇಣು ಶರ್ಮಾ,ಆರ್ಕಿಟೆಕ್ಟ್ ಗೋಕುಲ್ ರಾಜ್ ಮೊದಲಾದವರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X