ಟ್ರಂಪ್‌ರ ಮಾಜಿ ಭದ್ರತಾ ಸಲಹಾಕಾರನಿಗೆ ರಶ್ಯದಿಂದ ಹಣ ಸಂದಾಯ

ವಾಶಿಂಗ್ಟನ್, ಮಾ. 17: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಔತಣಕೂಟವೊಂದರಲ್ಲಿ ಭಾಗವಹಿಸುವುದು ಸೇರಿದಂತೆ, ವಿವಿಧ ಕೆಲಸಗಳಿಗಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ರಾಷ್ಟ್ರೀಯ ರಕ್ಷಣಾ ಸಲಹಾಕಾರ ಮೈಕ್ ಫ್ಲಿನ್ ಅವರಿಗೆ ರಶ್ಯದ ಮತ್ತು ರಶ್ಯದೊಂದಿಗೆ ನಂಟು ಹೊಂದಿರುವ ಸಂಸ್ಥೆಗಳು 55,500 ಡಾಲರ್ (ಸುಮಾರು 36.32 ಲಕ್ಷ ರೂಪಾಯಿ) ಪಾವತಿಸಿವೆ ಎಂದು ಗುರುವಾರ ಬಿಡುಗಡೆಗೊಂಡ ದಾಖಲೆಗಳು ಹೇಳಿವೆ.
ನಿವೃತ್ತ ಜನರಲ್ ಫ್ಲಿನ್ ಒಮ್ಮೆ ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆಯ ಮುಖ್ಯಸ್ಥರಾಗಿದ್ದರು.2015ರ ಡಿಸೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಟೆಲಿವಿಶನ್ ಸಂಸ್ಥೆ ಆರ್‌ಟಿ ಸಂಯೋಜಿಸಿದ ಔತಣಕೂಟದಲ್ಲಿ ಕೇವಲ ಭಾಗವಹಿಸುವುದಕ್ಕಾಗಿ ಅವರಿಗೆ 33,000 ಡಾಲರ್ (ಸುಮಾರು 21.6 ಲಕ್ಷ ರೂಪಾಯಿ) ನೀಡಲಾಗಿತ್ತು.
ಆರ್‌ಟಿಯು ರಶ್ಯ ಗುಪ್ತಚರ ಸಂಸ್ಥೆಯ ಒಂದು ಘಟಕ ಎಂಬುದಾಗಿ ಈಗ ಅಮೆರಿಕ ಹೇಳುತ್ತಿದೆ.
Next Story





