ಜೆಎನ್‌ಯು ವಿದ್ಯಾರ್ಥಿ ರಜನಿ ಕೃಷ್ ಆತ್ಮಹತ್ಯೆ ಪ್ರಕರಣ: ತನಿಖೆಗೆ ಆಗ್ರಹಿಸಿ ಎಸ್‌ಐಓ ಧರಣಿ
.jpg)
ಮಂಗಳೂರು, ಮಾ.17: ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ, ದಲಿತ ಸಮುದಾಯದ ಮುತ್ತುಕೃಷ್ಣನ್ ಯಾನೆ ರಜನಿ ಕೃಷ್‌ರ ಆತ್ಮಹತ್ಯೆ ಪ್ರಕರಣದ ತನಿಖೆಗೆ ಒತ್ತಾಯಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್‌ಐಓ) ಮಂಗಳೂರು ಘಟಕದ ಶುಕ್ರವಾರ ನಗರದ ಮಿನಿವಿಧಾನ ಸೌಧ ಎದುರು ಧರಣಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಐಓ ದ.ಕ. ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯಿಲ್, ದೇಶಾದ್ಯಂತ ವಿಶ್ವವಿದ್ಯಾನಿಲಯಗಳಲ್ಲಿ ಜಾತಿ ಹಾಗೂ ಧರ್ಮಾಧಾರಿತ ತಾರತಮ್ಯಗಳು ನಡೆಯುತ್ತಿವೆ. ದಲಿತ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟು ಪೂರ್ವಯೋಜಿತವಾಗಿ ಹಲ್ಲೆ ನಡೆಸುವಂತಹ ಕೃತ್ಯಗಳು ಮುಂದುವರಿಯುತ್ತಿವೆ. ಇಂತಹ ಘಟನೆಗಳು ಮರುಕಳಿಸಬಾರದು. ಜವಾಹರಲಾಲ್ ನೆಹರೂ ವಿವಿಯ ಸಂಶೋಧನಾ ವಿದ್ಯಾರ್ಥಿ ರಜನಿ ಕೃಷ್ ಅವರ ಆತ್ಮಹತ್ಯೆ ಪ್ರಕರಣವನ್ನು ತನಿಖೆಗೊಳಪಡಿಸಬೇಕೆಂದು ಆಗ್ರಹಿಸಿದರು.
ಎಸ್‌ಐಓ ದ.ಕ. ಜಿಲ್ಲಾ ಕಾರ್ಯದರ್ಶಿ ಬಾಸಿತ್ ಉಪ್ಪಿನಂಗಡಿ, ಜಿಲ್ಲಾ ಸಂಘಟಕಾ ಕಾರ್ಯದರ್ಶಿ ನಿಝಾಮ್ ಉಳ್ಳಾಲ, ಮಂಗಳೂರು ಘಟಕಾಧ್ಯಕ್ಷ ಮುಬೀನ್ ಅಹ್ಮದ್ ಉಪಸ್ಥಿತರಿದ್ದರು.
Next Story





