ಸ್ಯಾಂಡಲ್‌ವುಡ್‌ಗೆ ಉಸ್ತಾದ್ ಹೊಟೇಲ್

ಮಲಯಾಳಂನಲ್ಲಿ ಭಾರೀ ಯಶಸ್ಸು ಕಂಡಿದ್ದಲ್ಲದೆ, ವಿಮರ್ಶಕರಿಂದಲೂ ಭೇಷ್ ಎನಿಸಿಕೊಂಡ ‘ಉಸ್ತಾದ್ ಹೊಟೇಲ್’ ಇದೀಗ ಕನ್ನಡಕ್ಕೆ ರಿಮೇಕ್ ಆಗುತ್ತಿದೆ. ಬಹುಭಾಷಾ ನಟಿ ವೇದಿಕಾ ಈ ಚಿತ್ರಕ್ಕೆ ನಾಯಕಿಯಾಗಲಿದ್ದಾಳೆ. ‘ಗೌಡ್ರ ಹೊಟೇಲ್’ ಎಂದು ಹೆಸರಿಡಲಾದ ಈ ಚಿತ್ರಕ್ಕೆ ಪೊನ್ ಕುಮಾರ್ ಆ್ಯಕ್ಷನ್‌ಕಟ್ ಹೇಳಲಿದ್ದಾರೆ.
ಹೊಸಮುಖ ರಚನ್‌ಚಂದ್ರ ಚಿತ್ರದ ನಾಯಕ. ಉಸ್ತಾದ್ ಹೊಟೇಲ್‌ನಲ್ಲಿ ದುಲ್ಕರ್ ಸಲ್ಮಾನ್ ನಿರ್ವಹಿಸಿದ್ದ ಪಾತ್ರದಲ್ಲಿ ಆತ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಮಲಯಾಳಂನಲ್ಲಿ ಹಿರಿಯ ನಟ ತಿಲಕನ್ ನಟಿಸಿದ್ದ ಪಾತ್ರವನ್ನು ಕನ್ನಡದಲ್ಲಿ ಪ್ರಕಾಶ್‌ರಾಜ್ ನಿರ್ವಹಿಸಲಿದ್ದಾರೆ.
ಕನ್ನಡದ ನೇಟಿವಿಟಿಗೆ ತಕ್ಕಂತೆ ಚಿತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆಯಾದರೂ, ಕಥೆಯ ತಿರುಳನ್ನು ಯಥಾವತ್ ಹಾಗೆಯೇ ಉಳಿಸಿಕೊಳ್ಳಲಾಗಿದೆಯಂತೆ. ಎಪ್ರಿಲ್ ಮೊದಲವಾರದಲ್ಲಿ ಗೌಡ್ರ ಹೊಟೇಲ್‌ನ ಶೂಟಿಂಗ್ ಆರಂಭವಾಗಲಿದೆಯೆಂದು ಚಿತ್ರತಂಡದ ಅಂಬೋಣ.
ಬೆಂಗಳೂರು, ಮೈಸೂರು ಮತ್ತಿತರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಯುವನ್‌ಶಂಕರ್ ರಾಜಾ ಸಂಗೀತ ನೀಡಲಿದ್ದಾರೆ. ಗೌಡ್ರ ಹೊಟೇಲ್ ಚಿತ್ರದ ನಾಯಕಿ ವೇದಿಕಾಗೆ ಕೈತುಂಬಾ ಚಿತ್ರಗಳಿದ್ದರೂ, ಈ ಸಿನೆಮಾದ ಕಥೆ ಕೇಳಿ, ಆಕೆ ನಟಿಸಲು ಒಪ್ಪಿದ್ದಾರಂತೆ. ಸದ್ಯ ಆಕೆ ತಮಿಳಿನಲ್ಲಿ ವಿನೋದನ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇದರ ಜೊತೆಗೆ ಇನ್ನೊಂದು ಸ್ಯಾಂಡಲ್‌ವುಡ್‌ನ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮಲಯಾಳಂನಲ್ಲಿ ದಿಲೀಪ್ ನಾಯಕನಾಗಿರುವ ಸೆಂಟ್ರಲ್ ಜೈಲಿನಲ್ಲಿಯೂ ವೇದಿಕಾ ನಟಿಸುತ್ತಿದ್ದಾರೆ.







