ಮಜೀದಿ ಚಿತ್ರಕ್ಕೆ ಮಾಳವಿಕಾ ಮೋಹನ್ ಹೀರೋಯಿನ್

ಇರಾನ್‌ನ ಖ್ಯಾತ ನಿರ್ದೇಶಕ ಮಜೀದ್ ಮಜೀದಿ, ಇದೇ ಮೊದಲ ಬಾರಿಗೆ ಭಾರತದಲ್ಲಿ ನಿರ್ಮಿಸುತ್ತಿರುವ ಚಿತ್ರದಿಂದ ದೀಪಿಕಾ ಪಡುಕೋಣೆಯನ್ನು ಕೈಬಿಟ್ಟದ್ದು ಈಗ ಎಲ್ಲರಿಗೂ ಗೊತ್ತೇ ಇದೆ. ದೀಪಿಕಾ ನಟಿಸಲಿದ್ದ ಪಾತ್ರದಲ್ಲಿ ಮಲಯಾಳಂ ನಟಿ ಮಾಲವಿಕಾ ಮೋಹನ್ ಅಭಿನಯಿಸಲಿದ್ದಾರೆಂಬ ಲೇಟೆಸ್ಟ್ ಸುದ್ದಿ ಈಗ ಹೊರಬಿದ್ದಿದೆ.
ಮಜೀದಿ ನಿರ್ದೇಶನದ ‘ಬಿಯೋಂಡ್ ದಿ ಕ್ಲೌಡ್ಸ್’ಗೆ ಆಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮಲಯಾಳಂ ಚಿತ್ರರಂಗದ ಛಾಯಾಗ್ರಾಹಕ ಕೆ.ಯು. ಮೋಹನನ್‌ರ ಮಗಳಾದ ಮಾಳವಿಕಾ ಸಿನೆಮಾ ಮಾತ್ರವಲ್ಲ ರಂಗಭೂಮಿ ನಟಿಯೂ ಹೌದು. 2013ರಲ್ಲಿ ತೆರೆಕಂಡ ‘ಪಟ್ಟಂ ಪೋಲೆ’ ಚಿತ್ರದ ಮೂಲಕ ಮಾಲವಿಕಾ ಸಿನೆಮಾಜಗತ್ತನ್ನು ಪ್ರವೇಶಿಸಿದ್ದರು.
ಮಜೀದಿ ನಿರ್ದೇಶನದ ‘ಬಿಯೋಂಡ್ ದಿ ಕ್ಲೌಡ್ಸ್’ನಲ್ಲಿ, ಬಾಲಿವುಡ್ ನಟ ಶಾಹಿದ್ ಕಪೂರ್‌ನ ಸಹೋದರ ಇಶಾನ್ ಖಟ್ಟರ್, ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆೆ. ವಿಶೇಷವೆಂದರೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಗೌತಮ್ ಘೋಶ್ ಈ ಚಿತ್ರದಲ್ಲಿ ನಟಿಸಲಿದ್ದಾರೆ.
Next Story





