ಮುತ್ತುಕೃಷ್ಣನ್ ಫೇಸ್‌ಬುಕ್ ವಾಲ್ ಬಿಚ್ಚಿಡುವ ಸಂಘರ್ಷದ ಕಥೆಗಳು

ಎಂ’ಫಿಲ್ ಹಾಗೂ ಪಿಎಚ್‌ಡಿ ಪ್ರವೇಶದಲ್ಲಿ ಸಮಾನತೆ ಇಲ್ಲ. ವೈವಾದಲ್ಲಿ ಸಮಾನತೆ ಇಲ್ಲ. ಇಲ್ಲಿ ಇರುವುದು ಕೇವಲ ಸಮಾನತೆಯ ನಿರಾಕರಣೆ. ಸುಖದೇವ್ ಥೋರಟ್ ಶಿಫಾರಸುಗಳನ್ನು ನಿರಾಕರಿಸಲಾಗಿದೆ. ವಿದ್ಯಾರ್ಥಿಗಳ ಪ್ರತಿಭಟನಾ ಅವಕಾಶ ನಿರಾಕರಿಸಲಾಗಿದೆ. ನಿಮ್ನ ವರ್ಗದವರಿಗೆ ಶಿಕ್ಷಣ ನಿರಾಕರಿಸಲಾಗಿದೆ. ಸಮಾನತೆ ನಿರಾಕರಿಸಿದರೆ ಪ್ರತಿಯೊಂದನ್ನೂ ನಿರಾಕರಿಸಿದಂತೆ.
ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಜೆ.ಮುತ್ತುಕೃಷ್ಣನ್ ಅವರ ಫೇಸ್‌ಬುಕ್ ಖಾತೆಯ ಮೇಲೆ ಒಂದು ದೃಷ್ಟಿ ಹಾಯಿಸಿದರೆ, ಮೊದಲ ಪೀಳಿಗೆಯ ಸಂಶೋಧನಾ ವಿದ್ಯಾರ್ಥಿಗಳು ಎದುರಿಸುವ ತಾರತಮ್ಯ ಹಾಗೂ ಸಂಘರ್ಷದ ಕಥೆ ಅನಾವರಣಗೊಳ್ಳುತ್ತದೆ.
ಫೇಸ್‌ಬುಕ್‌ನ ಉದ್ದುದ್ದ ಪೋಸ್ಟ್‌ಗಳಲ್ಲಿ ಮುತ್ತುಕೃಷ್ಣನ್ ಅವರು, ತಮ್ಮ ಆರಂಭಿಕ ದಿನಗಳ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕುಟುಂಬದ ಅಗತ್ಯತೆ ಪೂರೈಸುವ ಸಲುವಾಗಿ ಮತ್ತು ಶಿಕ್ಷಣಕ್ಕೆ ಸಂಪನ್ಮೂಲ ಹೊಂದಿಸುವ ಸಲುವಾಗಿ, ಕಠಿಣ ಕೆಲಸಗಳನ್ನು ನಿರ್ವಹಿಸಿದ್ದರು. ತೀರಾ ಬಡಕುಟುಂಬದಿಂದ ಬಂದದ್ದು ಹಾಗೂ ದುರ್ಬಲ ವರ್ಗದ ಹಿನ್ನೆಲೆಯಿಂದ ಬಂದ ಮುತ್ತುಕೃಷ್ಣನ್, ದೇಶದ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲೊಂದಾದ ಜೆಎನ್‌ಯುನಲ್ಲಿನ ತಾರತಮ್ಯವನ್ನು ಸ್ವತಃ ಅನುಭವಿಸಿದ್ದಾರೆ.
‘‘ಸಮಾನತೆಯನ್ನು ನಿರಾಕರಿಸುವುದು ಎಂದರೆ ಪ್ರತಿಯೊಂದನ್ನೂ ನಿರಾಕರಿಸಿದಂತೆ’’ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಮುತ್ತುಕೃಷ್ಣನ್ ಮೂರು ದಿನಗಳ ಹಿಂದೆ ತಮ್ಮ ಕೊನೆಯ ಪೋಸ್ಟ್ ಆರಂಭಿಸಿದ್ದರು.
ಅವರ ಫೇಸ್‌ಬುಕ್ ಪೋಸ್ಟ್‌ಗಳು ತಮಿಳುನಾಡಿನ ಸೇಲಂನಲ್ಲಿ ಅವರ ಬಾಲ್ಯದ ದಿನಗಳನ್ನು ವಿವರಿಸಿವೆ. ಕುಟುಂಬಕ್ಕಾಗಿ ಹೇಗೆ ಅವರು ಮಾನಾ (ಗೋಮಾಂಸ) ಖರೀದಿಸುತ್ತಿದ್ದರು, ಗೋಮಾಂಸ ಹಿಡಿದುಕೊಂಡು ಹೇಗೆ ಬಸ್ಸು ಏರಿದರು? ಸಹ ಪ್ರಯಾಣಿಕರಿಂದ ಹೇಗೆ ಕಿರಿ ಕಿರಿ ಅನುಭವಿಸಿದರು? ಹೇಗೆ ಸಹಪಾಠಿಗಳು ಕೂಡಾ ಅವರ ಜತೆ ಮಾತನಾಡಲು ಹೇಗೆ ಹಿಂದೇಟು ಹಾಕುತ್ತಿದ್ದರು ಎನ್ನುವುದನ್ನು ವಿವರಿಸಿದ್ದಾರೆ.
‘‘ನನ್ನ ಚೀಲದಲ್ಲಿ ಗೋಮಾಂಸ ಕಂಡು ಹಲವು ಮಂದಿ ಮುಖ ತಿರುಗಿಸಿದರು. ಎದುರು ದಾಟಿದರು. ಅಂದಿನ ದಿನಗಳಲ್ಲಿ ಮಾನಾಗೆ ಸಮಾನತೆ ಇರಲಿಲ್ಲ. ಆದರೆ ಇಂದು ಯಾವುದೇ ಮಾನಾ ಇಲ್ಲ. ಅಂದರೆ ಸಮಾನತೆಯೇ ಇಲ್ಲ’’ ಎಂದು ಅವರು ಹೇಳಿದ್ದರು. ಎಂ’ಫಿಲ್ ಹಾಗೂ ಪಿಎಚ್‌ಡಿ ಪ್ರವೇಶದಲ್ಲಿ ಸಮಾನತೆ ಇಲ್ಲ. ವೈವಾದಲ್ಲಿ ಸಮಾನತೆ ಇಲ್ಲ. ಇಲ್ಲಿ ಇರುವುದು ಕೇವಲ ಸಮಾನತೆಯ ನಿರಾಕರಣೆ. ಸುಖದೇವ್ ಥೋರಟ್ ಶಿಫಾರಸುಗಳನ್ನು ನಿರಾಕರಿಸಲಾಗಿದೆ. ವಿದ್ಯಾರ್ಥಿಗಳ ಪ್ರತಿಭಟನಾ ಅವಕಾಶ ನಿರಾಕರಿಸಲಾಗಿದೆ. ನಿಮ್ನ ವರ್ಗದವರಿಗೆ ಶಿಕ್ಷಣ ನಿರಾಕರಿಸಲಾಗಿದೆ. ಸಮಾನತೆ ನಿರಾಕರಿಸಿದರೆ ಪ್ರತಿಯೊಂದನ್ನೂ ನಿರಾಕರಿಸಿದಂತೆ ಎಂದು ಮುತ್ತುಕೃಷ್ಣನ್ ವಿವರಿಸಿದ್ದರು.
ಏಕಮುಖ ಪ್ರೀತಿಯ ಬಹುಮುಖಗಳು
ಫೆಬ್ರವರಿ 15ರಂದು ಮಾಡಿದ ಮತ್ತೊಂದು ಪೋಸ್ಟ್‌ನಲ್ಲಿ ಮುತ್ತುಕೃಷ್ಣನ್ ಅವರು, ಕಾಲೇಜು ದಿನಗಳಿಂದ ಇದ್ದ ತಮ್ಮ ಪ್ರೀತಿಯ ಬಗ್ಗೆ ಬರೆದಿದ್ದಾರೆ. ಹುಡುಗಿಯೊಬ್ಬಳ ಜತೆಗಿನ ಸಂವಾದವನ್ನು ವಿವರಿಸಿದ್ದಾರೆ. ಆಕೆ ಈಗ ವಿವಾಹಿತ ಮಹಿಳೆ ಹಾಗೂ ಈಗ ಮುಂದುವರಿದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
‘‘ನಾನು ಇಳವರಸನ್, ಗೋಕುಲರಾಜ್, ಶಂಕರ್ ಆಗಲು ಇಚ್ಛಿಸುವುದಿಲ್ಲ! ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಪ್ರೀತಿ, ನಿನಗೆ ಆಕೆಗಿಂತ ಒಳ್ಳೆಯ ಹುಡುಗ ಈ ಜಗತ್ತಿನಲ್ಲಿ ಸಿಗುತ್ತಾಳೆ’’ ಎಂದು ಹೇಳಿತು. ಹೀಗೆ ತಮಿಳುನಾಡಿನಲ್ಲಿ ಹಿಂದೂ ಯುವತಿಯನ್ನು ಮದುವೆಯಾಗಿದ್ದಕ್ಕಾಗಿ ಮೂವರು ದಲಿತರನ್ನು ಹತ್ಯೆ ಮಾಡಿದ್ದ ಘಟನೆಯ ಪರ್ಯಾಯದ ಬಗ್ಗೆ ಗಮನ ಸೆಳೆದಿದ್ದಾರೆ.
ಗಣಿತದ ಇತಿಹಾಸ
ಎಂಫಿಲ್ ಹಾಗು ಪಿಎಚ್‌ಡಿ ಆಕಾಂಕ್ಷಿಗಳಿಗೆ ಪ್ರವೇಶ ಪರೀಕ್ಷೆ ಏರ್ಪಡಿಸುವ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಪ್ರಸ್ತಾವದ ವಿರುದ್ಧ ಜೆಎನ್‌ಯು ವಿದ್ಯಾರ್ಥಿಗಳು ಹೋರಾಡುತ್ತಿದ್ದಾಗ ಮತ್ತು ಸಂದರ್ಶನದ ಮೂಲಕವಷ್ಟೇ ಪ್ರವೇಶ ಪ್ರಕ್ರಿಯೆ ನಡೆಸುತ್ತಿದ್ದಾಗ ಮುತ್ತುಕೃಷ್ಣನ್ ಇದನ್ನು ಬರೆದಿದ್ದರು. ಖಾಸಗಿ ಕೋಚಿಂಗ್‌ಗೆ ಹೋಗದ ತನ್ನನ್ನು ಗಣಿತ ಶಿಕ್ಷಕರು ಹೇಗೆ ಗುರಿ ಮಾಡುತ್ತಿದ್ದಾರೆ ಎಂಬ ನೆನಪನ್ನು ಮೆಲುಕು ಹಾಕಿಕೊಂಡಿದ್ದಾರೆ. ಅವರು ಯಾವ ಹಿನ್ನೆಲೆಯಿಂದ ಬಂದವರು ಎಂಬ ಕಾರಣಕ್ಕಾಗಿ ಕೂಡಾ ಅವಮಾನ ಎದುರಿಸಬೇಕಾಗಿತ್ತು ಹಾಗೂ ಹೊಸ ಕೂದಲ ಶೈಲಿಗೆ ಹೇಗೆ ಅವಮಾನ ಎದುರಿಸಬೇಕಾಗಿತ್ತು ಎನ್ನುವುದನ್ನೂ ವಿವರಿಸಿದ್ದಾರೆ. ಆ ಬಳಿಕ ಆ ವಿಷಯವನ್ನು ಹೇಗೆ ದ್ವೇಷಿಸುತ್ತಿದ್ದರು ಎನ್ನುವುದನ್ನೂ ಬಣ್ಣಿಸಿದ್ದಾರೆ. ಆದರೆ ಅದನ್ನೇ ಸವಾಲಾಗಿ ತೆಗೆದುಕೊಂಡು, ಮೊದಲ ಪೀಳಿಗೆಯ ಪದವೀಧರನಾಗುವ ಮೂಲಕ ಮುಂದಿನವರಿಗೆ ಅವಕಾಶ ಸೃಷ್ಟಿಸಲು ಮುಂದಾಗಿದ್ದಾಗಿ ವಿವರಿಸಿದ್ದಾರೆ.
ಅಂತಿಮವಾಗಿ ಅವರು ತಮ್ಮ ಪೋಸ್ಟ್‌ನಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಹಂಗಾಮಿ ಅಧ್ಯಕ್ಷರಿಗೆ ಒಂದು ಮನವಿ ಮಾಡಿಕೊಂಡಿದ್ದಾರೆ. ತುಳಿತಕ್ಕೆ ಒಳಗಾದ ಮೊದಲ ಪೀಳಿಗೆಯವರಿಗೆ ಅವಕಾಶ ನೀಡಿ; ಇಲ್ಲದಿದ್ದರೆ ಆತ/ ಆಕೆ ಗಣಿತ ಎಂದರೆ ತಮ್ಮ ಶತ್ರು ಎಂದು ಪರಿಗಣಿಸುತ್ತಾರೆ. ಶಿಕ್ಷಣ ಎಂದರೆ ಖಿನ್ನತೆ!. ಆತ ಅಥವಾ ಆಕೆ ವಿಶ್ವವಿದ್ಯಾನಿಲಯವನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ ಎಂದರೆ, ತಾರತಮ್ಯ ಎಂಬ ಅರ್ಥ. ದಯವಿಟ್ಟು ಬದಲಿಸಿ; ದಯವಿಟ್ಟು ಅವಕಾಶ ನೀಡಿ.
ಪ್ರೀತಿಪಾತ್ರರ ನೆನಪು
ತಾಜ್‌ಮಹಲ್‌ಗೆ ಭೇಟಿ ನೀಡಿದ ಮತ್ತೊಂದು ಘಟನೆಯನ್ನು ಮುತ್ತುಕೃಷ್ಣನ್ ನೆನಪಿಸಿಕೊಂಡಿದ್ದಾರೆ. ತಮ್ಮ ಅಜ್ಜಿ ಸೆಲ್ಲಮ್ಮಾಳ್ ಹಾಗೂ ಕುಟುಂಬಕ್ಕಾಗಿ ಮನೆ ಕಟ್ಟಿಕೊಳ್ಳಲು ಮನವೊಲಿಸಿದ್ದನ್ನು ಮೆಲುಕು ಹಾಕಿಕೊಂಡಿದ್ದಾರೆ. ಸೆಲ್ಲಮ್ಮಾಳ್ ಖಾಸಗಿ ಶಾಲೆಯೊಂದರಲ್ಲಿ ನೈರ್ಮಲ್ಯ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದರು. ತಮ್ಮ ಕೊನೆಯ ದಿನದವರೆಗೂ ಅವರು ದುಡಿಯುತ್ತಿದ್ದರು. ಅಜ್ಜಿ ತಮಗೆ ನೀಡುತ್ತಿದ್ದ ಸಲಹೆಗಳನ್ನು ಮತ್ತು ಕುಟುಂಬವನ್ನು ಚೆನ್ನಾಗಿ ನೋಡಿಕೋ ಎಂಬ ಉಪದೇಶವನ್ನು ಅವರು ನೆನಪಿಸಿಕೊಂಡಿದ್ದಾರೆ. ಆದರೆ ಸೆಲ್ಲಮ್ಮಾಳ್ ಮೃತಪಟ್ಟಾಗ, ಅಂತಿಮ ನಮನ ಸಲ್ಲಿಸುವುದಕ್ಕಾಗಿ ಮನೆಗೆ ಹೋಗಲು ಸಾಧ್ಯವಾಗಲಿಲ್ಲ. ಏಕೆ ಗೊತ್ತೇ? ದಿಲ್ಲಿಯಿಂದ ಹುಟ್ಟೂರಿಗೆ ಪ್ರಯಾಣಿಸಲು ಅವರ ಬಳಿ ಹಣ ಇರಲಿಲ್ಲ. ಪ್ರೀತಿಯ ಸ್ಮಾರಕದಿಂದ, ಮುತ್ತುಕೃಷ್ಣನ್ ಹೀಗೆ ಬರೆಯುತ್ತಾರೆ. ‘‘ಪ್ರಿಯತಮೆ ಇಲ್ಲದೇ ತಾಜ್‌ಮಹಲ್‌ನಲ್ಲಿ; ನಾನು ನನ್ನ ಸೆಲ್ಲಮ್ಮಾಳ್ ಆಯಾ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. ನನ್ನ ಸೆಲ್ಲಮ್ಮಾ ನನ್ನ ಆತ್ಮ ಎನ್ನುವುದು ನನಗೆ ಮನವರಿಕೆಯಾಗಿತ್ತು’’.







