ಕಲಾಭವನ್ ಮಣಿ ದೇಹದಲ್ಲಿ ಕೀಟನಾಶಕ ಪತ್ತೆಯಾಗಿಲ್ಲ: ಪೊಲೀಸರು
ಕೊಚ್ಚಿ,ಮಾ. 17: ಕಲಾಭವನ್ ಮಣಿಯ ಸಾವು ಹತ್ಯೆಯೆಂದು ಸಂದೇಹಪಡುವ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಪೊಲೀಸರುಕೇರಳ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಹೈದರಾಬಾದ್‌ನ ಸೆಂಟ್ರಲ್ ಫಾರೆನ್ಸಿಕ್ ಲ್ಯಾಬ್‌ನಲ್ಲಿ ನಡೆಸಲಾದ ರಕ್ತಪರೀಕ್ಷೆಯಲ್ಲಿ ವಿಷ ಮದ್ಯ(ಮಿಥೈಲ್ ಆಲ್ಕೋಹಾಲ್) ಅಂಶ ಮಾತ್ರ ಕಂಡು ಬಂದಿದೆ. ಕೀಟನಾಶಕ ಅಂಶ ಪತ್ತೆಯಾಗಿಲ್ಲ. ಕಲಾಭವನ್ ಮಣಿಸಾವು ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಬೇಕೆಂದು ಸಹೋದರ ರಾಮಕೃಷ್ಣನ್ ಆಗ್ರಹಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಮಣಿಯ ಶರೀರದಲ್ಲಿ ವಿಷ ಮದ್ಯ ಜೊತೆಗೆ ಕ್ಲಾರ್‌ಪೈಪರೀಸ್ ಎನ್ನುವ ಕೀಟನಾಶಕ ಕೂಡ ಇತ್ತೆಂದು ಎರ್ನಾಕುಲಂನಲ್ಲಿರುವ ರೀಜನಲ್ ಲ್ಯಾಬ್ ವರದಿ ತಿಳಿಸಿತ್ತು. ಮಣಿ 2016 ಮಾರ್ಚ್ 6ರಂದು ನಿಧನರಾಗಿದ್ದರು. ಕಿಡ್ನಿ ವೈಫಲ್ಯವು ಸಾವಿಗೆ ಕಾರಣವಾಗಿದೆಯೇ ಎಂದು ಕೂಡ ತಪಾಸಣೆ ನಡೆಯುತ್ತಿದೆ. ಮಣಿಯ ಹತ್ಯೆ ನಡೆದಿದೆಯೆಂದು ಸೂಚಿಸುವ ಯಾವುದೇ ಪುರಾವೆಗಳು ದೊರಕಿಲ್ಲವೆಂದು ವರದಿಯಾಗಿದೆ.
Next Story