ಹಟ್ಟಿಯಿಂದ ದನ ಕಳವು
ಕಾರ್ಕಳ, ಮಾ.17: ತಾಲೂಕಿನ ನಲ್ಲೂರು ಗ್ರಾಮದ ಕುಟ್ಟಬೆಟ್ಟು ಮನೆ ಎಂಬಲ್ಲಿರುವ ಶಾಲಿನಿ ಶೆಟ್ಟಿ ಅವರ ಮನೆಯ ಬಳಿ ಇರುವ ತೆರೆದ ದನದ ಹಟ್ಟಿಯಿಂದ ಹಟ್ಟಿಯಲ್ಲಿ ಕಟ್ಟಿದ ಹಾಕಿದ ದನಗಳಲ್ಲಿ ನಾಲ್ಕು ದನಗಳನ್ನು ಯಾರೋ ಕಳ್ಳರು ಗುರುವಾರ ರಾತ್ರಿ 12ರಿಂದ ಇಂದು ಬೆಳಗಿನ ಜಾವ 5ಗಂಟೆಯ ನಡುವಿನ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುವುದಾಗಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವಾದ ದನಗಳ ಒಟ್ಟು ವೌಲ್ಯ ಸುಮಾರು 40,000ರೂ.ಗಳೆಂದು ಹೇಳಲಾಗಿದೆ.
Next Story





