ನಿಟ್ಟೆಯಲ್ಲಿ ವೈರ್‌ಲೆಸ್ ಕಮ್ಯುನಿಕೇಶನ್ ಕಾನರೆನ್ಸ್

ಕಾರ್ಕಳ, ಮಾ.17: ಇಂದು ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ಹಾಗೂ ಬೆಳವಣೆಗೆಯನ್ನು ಕಾಣುತ್ತಿದ್ದೇವೆ. ತಂತ್ರಜ್ಞಾನದ ಬೆಳವಣಿಗೆಯಿಂದ ಬ್ಯಾಂಕಿಂಗ್, ವೈದ್ಯಕೀಯ ಹಾಗೂ ಶಿಕ್ಷಣದಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣಬಹುದಾಗಿದೆ ಎಂದು ಸಿಸ್ಕೋ ಇಂಡಿಯಾ ಪ್ರೆ.ಲಿ. ಮುಂಬೈಯ ಪ್ರೋಡಕ್ಟ್ ಸೇಲ್ಸ್ ಸ್ಪೆಷಾಲಿಷ್ಟ್ ಹರ್ಷದ್ ಖೇಯೋರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾನಿಲಯದಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗವು ಇಸ್ರೋ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡ 2 ದಿನಗಳ ಎಮರ್ಜಿಂಗ್ ಟ್ರೆಂಡ್ಸ್ ಇನ್ ವೈರ್‌ಲೆಸ್ ಕಮ್ಯುನಿಕೇಶನ್ ಆ್ಯಂಡ್ ಸಿಗ್ನಲ್ ಪ್ರೋಸೆಸಿಂಗ್ ಕಾನರೆನ್ಸ್‌ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸುಮಾರು ಎರಡು ದಶಕಗಳಲ್ಲಿ ತಂತ್ರಜ್ಞಾನ ಕ್ಷೇತ್ರದ ಕ್ರಾಂತಿಯು ವಿಶ್ವಕ್ಕೆ ಸಂವಹನ ಪ್ರಕ್ರಿಯೆಯನ್ನು ಬಹಳಷ್ಟು ಸುಲಭವಾಗಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಳೂಣಕರ್ ಮಾತನಾಡಿ, ಇಸ್ರೋದಂತಹ ಸಂಸ್ಥೆಯು ಈ ಕಾನರೆನ್ಸ್‌ಗೆ ಪ್ರೋತ್ಸಾಹಿಸುತ್ತಿರುವುದು ಸಂತಸದ ಹಾಗೂ ಹೆಮ್ಮೆಯ ವಿಚಾರ ಎಂದರು.
ಇದೇ ಸಂದರ್ಭ ಇಸ್ರೋದ ಐ.ಐ.ಆರ್.ಎಸ್ ಕೋರ್ಸ್‌ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಐ.ಐ.ಆರ್.ಎಸ್ ಸಂಯೋಜಕ ಕಂಪ್ಯೂಟರ್ ಸಾಯನ್ಸ್ ವಿಭಾಗದ ಡಾ.ಉದಯಕುಮಾರ್ ಶೆಣೈ ಹಾಗೂ ಸಿವಿಲ್ ವಿಭಾಗದ ಡಾ.ರಾಧಾಕೃಷ್ಣ ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥೆ ಡಾ.ರೇಖಾ ಭಂಡಾರ್‌ಕರ್ ಸ್ವಾಗತಿಸಿದರು. ಕಾರ್ಯಾಗಾರ ಸಂಯೋಜಕ ಡಾ.ಶಿವಪ್ರಕಾಶ್ ಕಾರ್ಯಾಗಾರದ ಬಗೆಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಪ್ರಾಧ್ಯಾಪಕ ಸುಕೇಶ್ ರಾವ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸಹಪ್ರಾಧ್ಯಾಪಕ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಹಪ್ರಾಧ್ಯಾಪಕ ಹಾಗೂ ಕಾರ್ಯಕ್ರಮದ ಸಹ ಸಂಯೋಜಕ ದುರ್ಗಾಪ್ರಸಾದ್ ವಂದಿಸಿದರು.







