Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ನೂತನ ಕಡಬ ತಾಲೂಕಿಗೆ ಬಜತ್ತೂರು ಗ್ರಾಮ...

ನೂತನ ಕಡಬ ತಾಲೂಕಿಗೆ ಬಜತ್ತೂರು ಗ್ರಾಮ ಸೇರ್ಪಡೆಗೆ ವಿರೋಧ

ಸಮಿತಿ ರಚಿಸಿ ಹೋರಾಟಕ್ಕೆ ಮುಂದಾದ ಗ್ರಾಮಸ್ಥರು

ವಾರ್ತಾಭಾರತಿವಾರ್ತಾಭಾರತಿ17 March 2017 11:56 PM IST
share
ನೂತನ ಕಡಬ ತಾಲೂಕಿಗೆ ಬಜತ್ತೂರು ಗ್ರಾಮ ಸೇರ್ಪಡೆಗೆ ವಿರೋಧ

 ಉಪ್ಪಿನಂಗಡಿ, ಮಾ.17: ಬಜತ್ತೂರು ಗ್ರಾಮವನ್ನು ನೂತನ ಕಡಬ ತಾಲೂಕಿಗೆ ಸೇರಿಸುವುದಕ್ಕೆ ಬಜತ್ತೂರು ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಬಜತ್ತೂರು ಗ್ರಾಪಂ ಸಭಾಭವನದಲ್ಲಿ ಸಮಾಲೋಚನಾ ಸಭೆ ನಡೆಸಿದ ಗ್ರಾಮಸ್ಥರು, ಹೋರಾಟ ಸಮಿತಿ ರಚಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.

ಸಭೆಯನ್ನುದ್ದೇಶಿಸಿ ಜಿಪಂ ಮಾಜಿ ಸದಸ್ಯ ಕೇಶವ ಗೌಡ ಬಜತ್ತೂರು ಮಾತನಾಡಿ, ಪುತ್ತೂರು ತಾಲೂಕಿನಲ್ಲಿದ್ದ ಬಜತ್ತೂರು ಗ್ರಾಮವನ್ನು ಕಡಬ ತಾಲೂಕಿಗೆ ಸೇರಿಸಿದರೆ ಇಲ್ಲಿನ ಜನತೆ ಸಂಕಷ್ಟ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಜಾತಿ, ಧರ್ಮ ಮರೆತು ಗ್ರಾಮಸ್ಥರೆಲ್ಲಾ ಇದರ ವಿರುದ್ಧ ಧ್ವನಿಯೆತ್ತಬೇಕು. ಈಗ ಇದು ಪ್ರಸ್ತಾವನೆ ಹಂತದಲ್ಲಿದ್ದು, ಮುಂದಕ್ಕೆ ಗಜೆಟ್ ನೋಟೀಫಿಕೆಶನ್ ಆದರೆ ಹೋರಾಟ ಲ ನೀಡದು. ಆದ್ದರಿಂದ ಬಜತ್ತೂರು ಗ್ರಾಮವನ್ನು ಪುತ್ತೂರು ತಾಲೂಕಿನಲ್ಲಿಯೇ ಉಳಿಸಿಕೊಳ್ಳುವವರೆಗೆ ನಿರಂತರ ಹೋರಾಟ ನಡೆಸಬೇಕು ಎಂದರು.

ಎಪಿಎಂಸಿ ನಾಮನಿರ್ದೇಶಿತ ಸದಸ್ಯ ಮಾಣಿಕ್ಯರಾಜ್ ಪಡಿವಾಳ್ ಮಾತನಾಡಿ, ರಾಜಕೀಯ ರಹಿತ ಹೋರಾಟ ನಮ್ಮದಾಗಿದ್ದು, ಗ್ರಾಮಸ್ಥರ ಹೋರಾಟ ಸಮಿತಿಯನ್ನು ರೂಪಿಸಿ ಅದರಡಿಯಲ್ಲಿ ಹೋರಾಟ ನಡೆಸಬೇಕು. 2009ರಲ್ಲಿ ಇದರ ಪ್ರಸ್ತಾವ ಇದ್ದಾಗ ಆ ಸಂದರ್ಭವೇ ಗ್ರಾಮ ಸಭೆಯಲ್ಲಿ ಅದರ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ. ಇದನ್ನು ಶಾಸಕಿ ಸೇರಿದಂತೆ ಎಲ್ಲರಿಗೂ ಮನವರಿಕೆ ಮಾಡಬೇಕು ಎಂದರು.

 ತಾಪಂ ಸದಸ್ಯ ಮುಕುಂದ ಗೌಡ ಬಜತ್ತೂರು, ಶ್ರೀರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಾಧಾಕೃಷ್ಣ ಕುವೆಚ್ಚಾರು, ಪ್ರಮುಖರಾದ ಗೋಪಾಲಕೃಷ್ಣ ಪೊರೋಳಿ, ದೇವದಾಸ್ ಕನಿಯ, ಜಯಂತ ಬೆದ್ರೋಡಿ ಸಭೆಯಲ್ಲಿ ಪೂರಕವಾಗಿ ಮಾತನಾಡಿದರು.

ಮುಂದಿನ ಹೋರಾಟದ ಬಗ್ಗೆ ಸಭೆಯಲ್ಲಿ ಸಮಗ್ರ ಚರ್ಚೆ ನಡೆದು, ಬಜತ್ತೂರು ಗ್ರಾಮವನ್ನು ಕಡಬ ತಾಲೂಕಿಗೆ ಸೇರ್ಪಡೆಗೊಳಿಸುವುದನ್ನು ಕೈಬಿಡಲಾಗಿದೆ ಎಂದು ಬಜತ್ತೂರು ಗ್ರಾಪಂಗೆ ಕಂದಾಯ ಇಲಾಖಾಕಾರಿಗಳಿಂದ ಲಿಖಿತ ಪತ್ರ ಬರುವವರೆಗೆ ಹೋರಾಟ ನಡೆಸಲು ತೀರ್ಮಾನಿಸಿ, ಮೊದಲ ಹಂತವಾಗಿ ಗ್ರಾಮಸ್ಥರ ಸಹಿ ಸಂಗ್ರಹ, ಜಿಲ್ಲಾಕಾರಿ ಕಚೇರಿಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲನೆ, ಬಳಿಕ ಶಾಸಕರು, ಉಸ್ತುವಾರಿ ಸಚಿವರು, ಕಂದಾಯ ಸಚಿವರ ಬಳಿಗೆ ನಿಯೋಗ ತೆರಳಿ ಮನವಿ ಸಲ್ಲಿಸುವುದು. ಬಳಿಕವೂ ಬೇಡಿಕೆ ಈಡೇರದಿದ್ದರೆ ರಸ್ತೆ ತಡೆ ಮುಂತಾದ ಉಗ್ರ ಪ್ರತಿಭಟನೆ ಹಾಗೂ ಕಾನೂನಾತ್ಮಕ ಹೋರಾಟ ನಡೆಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಬಜತ್ತೂರು ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್ ಪಂರ್ದಾಜೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಗ್ರಾಪಂ ಉಪಾಧ್ಯಕ್ಷೆ ಸುಜಾತಾ ಎನ್., ಎಪಿಎಂಸಿ ಸದಸ್ಯ ಗುರುನಾಥ ಪಿ.ಎನ್., ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಯಶವಂತ ಜಿ., ನಿರ್ದೇಶಕ ಜಗದೀಶ್ ರಾವ್ ಮಣಿಕ್ಕಳ, ಗ್ರಾಪಂ ಸದಸ್ಯರಾದ ಪ್ರೆಸಿಲ್ಲಾ ಡಿಸೋಜ, ಸೇಸಪ್ಪ ಗೌಡ, ಚಂಪಾ, ಮಾಧವ ಒರುಂಬೋಡಿ, ಆನಂದ ಕೆ.ಎಸ್., ರಾಜೇಶ್ ಪಿಜಕ್ಕಳ, ಲೀಲಾವತಿ, ತೇಜಕುಮಾರಿ, ಪ್ರಮುಖರಾದ ಶ್ರೀಧರ ಗೌಡ ಮುದ್ಯ, ಲೊಕೇಶ್ ಗೌಡ ಬಜತ್ತೂರು, ನವೀನ, ಗಣೇಶ್ ಕುಲಾಲ್, ಜಯಂತ ಬೆದ್ರೋಡಿ, ಗಂಗಾಧರ ಪಿ.ಎನ್., ಧನಂಜಯ ಬೆದ್ರೋಡಿ, ಶಿವರಾಮ ಕಾರಂತ, ಸಿದ್ದಪ್ಪ ಗೌಡ ನಡ್ಪ, ಶ್ರೀಧರ ರಾವ್ ಮಣಿಕ್ಕಳ, ಜಯವಿಠಲ, ಜಗದೀಶ್ ಕಿಂಡೋವು, ಕ್ಷೇವಿಯರ್ ಅಹಮ್ಮದ್ ಪಂರ್ದಾಜೆ, ಜನಾರ್ದನ ಪಂರ್ದಾಜೆ, ಸಚಿನ್ ಪಂರ್ದಾಜೆ, ಕುಶಾಲಪ್ಪ ಗೌಡ ಸುಳ್ಯ, ಕೃಷ್ಣಪ್ರಸಾದ್ ಕುವೆಚ್ಚಾರ್, ನಾರಾಯಣ ಪುಯಿಲ, ಉಮ್ಮರ್ ಕೆಮ್ಮಾರ, ವಿಶ್ವನಾಥ ಗೌಡ ಪಿಜಕ್ಕಳ, ಓಡಿಯಪ್ಪ ಗೌಡ ಡೆಂಬಳೆಪುತ್ತು ಎಂಜಿರಡ್ಕ, ದೇರಣ್ಣ ಗೌಡ ಓಮಂದೂರು ಮೊದಲಾದವರು ಉಪಸ್ಥಿತರಿದ್ದರು.

ಗಣೇಶ್ ಕುಲಾಲ್ ಸ್ವಾಗತಿಸಿದರು. ಗ್ರಾಪಂ ಸದಸ್ಯ ಗಣೇಶ್ ಕಿಂಡೋವು ವಂದಿಸಿದರು. ಕಾರ್ಯಕ್ರಮ ನಿರೂಪಿಸಿದರು.

ಹೋರಾಟ ಸಮಿತಿ ರಚನೆ

ಸಭೆಯಲ್ಲಿ ಮುಂದಿನ ಹೋರಾಟಗಳ ಬಗ್ಗೆ ಸಮಗ್ರ ಚರ್ಚೆಯಾಗಿ ಹೋರಾಟಕ್ಕಾಗಿ ‘ಹೋರಾಟ ಸಮಿತಿ’ಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಕೇಶವ ಗೌಡ ಬಜತ್ತೂರು, ಉಪಾಧ್ಯಕ್ಷರಾಗಿ ಮಾಣಿಕ್ಯರಾಜ್ ಪಡಿವಾಳ್, ಕಾರ್ಯದರ್ಶಿಯಾಗಿ ವಿಶ್ವನಾಥ ಗೌಡ ಪಿಜಕ್ಕಳ, ಕೋಶಾಕಾರಿಯಾಗಿ ಜಗದೀಶ್ ರಾವ್ ಮಣಿಕ್ಕಳ ಅವರನ್ನು ಆಯ್ಕೆ ಮಾಡಲಾಯಿತು.

ಸದಸ್ಯರಾಗಿ ಯಶವಂತ ಗೌಡ ಗುಂಡ್ಯ, ಪೌಲ್ ಡಿಸೋಜ, ಗಣೇಶ್ ಕುಲಾಲ್, ಅಹ್ಮದ್ ಬಾವ, ಗಂಗಾಧರ ಪಿ.ಎನ್.ಓಡಿಯಪ್ಪ ಗೌಡ ಡೆಂಬಲೆ, ಗೋಪಾಲಕೃಷ್ಣ ಪೊರೋಳಿ, ಲೋಕೇಶ್ ಗೌಡ ಬಜತ್ತೂರು, ಪಿ.ಬಿ.ಉಮರಬ್ಬ, ಜಯಂತ ಬೆದ್ರೋಡಿ, ಶಿವರಾಮ ಕಾರಂತ, ಶ್ರೀಧರ ರಾವ್ ಮಣಿಕ್ಕಳ, ದೇರಣ್ಣ ಒಮಂದೂರು, ಧನಂಜಯ ಬೆದ್ರೋಡಿ, ರಾಧಾಕೃಷ್ಣ ಕೆ.ಎಸ್., ಶ್ರೀಧರ ಗೌಡ ಮುದ್ಯ, ಮಹೇಂದ್ರ ವರ್ಮ ಮೇಲೂರು, ವಸಂತ ಗೌಡ ಪಿಜಕ್ಕಳ, ಉಮ್ಮರ್ ಕೆಮ್ಮಾರ, ಅನಿತಾ ಪಿಜಕ್ಕಳರನ್ನು ಹಾಗೂ ಇಲ್ಲಿನ ಗ್ರಾಪಂ, ತಾಪಂ, ಜಿಪಂ ಸೇರಿದಂತೆ ಎಲ್ಲ ಜನಪ್ರತಿನಿಗಳನ್ನು ಖಾಯಂ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X