ವಿದ್ಯುತ್ ನಿಲುಗಡೆ
ಮಂಗಳೂರು, ಮಾ.17: ಕವಿಪ್ರನಿನಿ ಬೃಹತ್ ಕಾಮಗಾರಿ ವಿಭಾಗ ಮಂಗಳೂರು ಇವರ ವತಿಯಿಂದ ಹಾಲಿ 110 ಕೆವಿ ನೆಟ್ಲಮುಡ್ನೂರು- ಪುತ್ತೂರು ಏಕಮಾರ್ಗವನ್ನು ದ್ವಿಮಾರ್ಗವಾಗಿ ಪರಿವರ್ತಿಸುವ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಮಾ.18, 22 ಮತ್ತು 26ರಂದು ಬೆಳಗ್ಗೆ 6ರಿಂದ ಸಂಜೆ 5ರವರೆಗೆ ಪುತ್ತೂರು ಹಾಗೂ ಕ್ಯಾಂಪ್ರೋ ಕುಂಬ್ರ, ಬೆಳ್ಳಾರೆ, ಸುಳ್ಯ, ಸವಣೂರು, ನೆಲ್ಯಾಡಿ, ಕಡಬ ಮತ್ತು ಸುಬ್ರಹ್ಮಣ್ಯ ಉಪ ವಿದ್ಯುತ್ ಕೇಂದ್ರದಿಂದ ಹೊರಡುವ ಎಲ್ಲ ಪೀಡರ್‌ಗಳಲ್ಲಿ ವಿದ್ಯುತ್ ಸರಬರಾಜು ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟನೆಯಲ್ಲಿ ತಿಳಿಸಿದೆ.
Next Story





