ಸುಪ್ರೀಂ ಆದೇಶದಂತೆ ಎಂಡೋ ಸಂತ್ರಸ್ತರಿಗೆ ಮಾ.30ರೊಳಗೆ ಪರಿಹಾರಧನ ವಿತರಣೆ: ಸಚಿವ ಚಂದ್ರಶೇಖರನ್
.gif)
ಕಾಸರಗೋಡು, ಮಾ.18: ಸುಪ್ರೀಂಕೋರ್ಟ್ ಆದೇಶದಂತೆ ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರ ಧನವನ್ನು ಮಾ.30ರೊಳಗೆ ವಿತರಿಸಲಾಗುವುದು ಎಂದು ಕೇರಳ ಕಂದಾಯ ಸಚಿವ ಇ.ಚಂದ್ರಶೇಖರನ್ ಹೇಳಿದರು.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಎಂಡೋಸಲ್ಫಾನ್ ಸೆಲ್ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಎಂಡೋ ಸಂತ್ರಸ್ತರಿಗೆ ಮೂರು ತಿಂಗಳೊಳಗೆ ತಲಾ ಐದು ಲಕ್ಷ ರೂ. ವಿತರಿಸಬೇಕು ಎಂದು ಜನವರಿ 10ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಹಿನ್ನಲೆಯಲ್ಲಿ ಪ್ರಥಮ ಹಂತದ ಪರಿಹಾರವನ್ನು ಶೀಘ್ರ ವಿತರಿಸಲು ಸಭೆ ತೀರ್ಮಾನ ತೆಗೆದುಕೊಂಡಿತು.
ಎಂಡೋ ಸಂತ್ರಸ್ತರಿಗಾಗಿ ಎಪ್ರಿಲ್ ನಾಲ್ಕರಿಂದ ಒಂಬತ್ತರ ತನಕ ಐದು ಕೇಂದ್ರಗಳಲ್ಲಿ ವೈದ್ಯಕೀಯ ಶಿಬಿರ ನಡೆಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು, ಜಿಲ್ಲಾಧಿಕಾರಿ ಕೆ.ಜೀವನ್‌ಬಾಬು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಎಂಡೋ ಸೆಲ್ ವಿಭಾಗದ ಉಪ ಜಿಲ್ಲಾಧಿಕಾರಿ ರವೀಂದ್ರನ್ ಮೊದಲಾದವರು ಉಪಸ್ಥಿತರಿದ್ದರು.
Next Story





