ಜಯಲಲಿತಾ ‘ಪುತ್ರ’ನಿಗೆ ನ್ಯಾಯಲಯದಿಂದ ಎಚ್ಚರಿಕೆ

ಚೆನ್ನೈ, ಮಾ. 18: ತಮಿಳ್ನಾಡಿನ ಮುಖ್ಯಮಂತ್ರಿ ಜಯಲಲಿತಾರ ಪುತ್ರ ತಾನೆಂದು ವಾದಿಸಿ ನ್ಯಾಯಾಲಯಕ್ಕೆ ಅರ್ಜಿಸಲ್ಲಿಸಿದ ಯುವಕನಿಗೆ ಉಚ್ಚ ನ್ಯಾಯಾಲಯ ಎಚ್ಚರಿಕೆ ನೀಡಿದೆ. ನಿಮ್ಮನ್ನು ಜೈಲಿಗೆ ಹಾಕಬೇಕು. ಆದರೆ ಈಗ ನಾವು ಹಾಗೆ ಮಾಡುವುದಿಲ್ಲ ಎಂದು ಮದ್ರಾಸ್ ಉಚ್ಚ ನ್ಯಾಯಾಲಯ ಹೇಳಿದೆ. ಅರ್ಜಿಯ ಜೊತೆ ನೀಡಿದ ದಾಖಲೆಗಳ ಝೆರಾಕ್ಸ್ ಕಾಪಿ ಕೃತಕವೆಂದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿತ್ತು. ಆದ್ದರಿಂದ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಆರ್. ಮಹಾದೇವನ್ ಜಯಲಿಲಿತಾ ಪುತ್ರ ಎಂದು ಹೇಳುತ್ತಿರುವ ಜೆ.ಕೃಷ್ಣಮೂರ್ತಿಗೆ ಖಾರವಾದ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ದಿವಂಗತ ಜಯಲಲಿತಾ, ದಿವಂಗತ ತೆಲುಗು ನಟ ಶೋಭನಾ ಬಾಬುಗೆ ಜನಿಸಿದ ಪುತ್ರ ತಾನೆಂದು ಈರೋಡಿನ ಜೆ. ಕೃಷ್ಣಮೂರ್ತಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿಸಲ್ಲಿಸಿದ್ದರು. ಜನನ ಸರ್ಟಿಫಿಕೇಟ್ , ದತ್ತು ನೀಡಿದ ದಾಖಲೆಗಳ ನಕಲು ಪ್ರತಿಯನ್ನು ಈತ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಜಯಲಲಿತಾ, ಶೋಭನ್ ಬಾಬು, ವಸಂತಮಣಿ ಮತ್ತು ಎಂಜಿಆರ್ ಸಾಕ್ಷಿ ಹಾಕಿದ ದಾಖಲೆಗಳು ಅದರಲ್ಲಿದ್ದವು. ಆದರೆ ಈ ಕಾಲದಲ್ಲಿ ದಾಖಲೆ ತಯಾರಿಸುವಷ್ಟು ಆರೋಗ್ಯ ಎಂಜಿಆರ್‌ಗೆ ಇರಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ನೈಜ ದಾಖಲೆಗಳು ಎಲ್ಲಿ ಎಂದು ನ್ಯಾಯಾಲಯ ಯುವಕನನ್ನು ಪ್ರಶ್ನಿಸಿತು.
ದಾಖಲೆಗಳ ಆಧಾರದಲ್ಲಿ ತನಗೆ ಜಯಲಲಿತಾ ಪುತ್ರ ಎಂದು ಅಂಗೀಕಾರ ನೀಡಬೇಕು ಮತ್ತು ಪೋಯಸ್ ಗಾರ್ಡನ್ ಸಹಿತ ಜಯಲಲಿತಾರ ಆಸ್ತಿಗಳ ಹಕ್ಕುದಾರ ತಾನೆಂದು ನ್ಯಾಯಾಲಯಕ್ಕೆ ಜೆ. ಕೃಷ್ಣಮೂರ್ತಿ ಅರ್ಜಿಸಲ್ಲಿಸಿದ್ದರು.







