ಸಿದ್ದರ ಬೆಟ್ಟದ ಪ್ರೇಮಿಗಳ ಬೆತ್ತಲೆ ಪ್ರಕರಣ: ಆರೋಪಿಗೆ 7 ವರ್ಷ ಜೈಲು ಶಿಕ್ಷೆ

ಮಧುಗಿರಿ, ಮಾ.18: 2016 ಮಾ.20 ರಂದು ಕೊರಟಗೆರೆ ತಾಲೂಕಿನ ಸಿದ್ದರ ಬೆಟ್ಟದಲ್ಲಿ ಪ್ರೇಮಿಗಳನ್ನು ವಿವಸ್ರಗೊಳಿಸಿ, ದರೋಡೆ ಮಾಡಿದ್ದ ಅಪರಾಧಿ ಖಾಸಗಿ ಬಸ್ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ಕೊರಟಗೆರೆ ತಾಲೂಕಿನ ಅರೆ ಗುಜ್ಜನಹಳ್ಳಿಯಲ್ಲಿ ವಾಸಿ ಭೀಮರಾಜುಗೆ (27) ನ್ಯಾಯಾಧೀಶರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸಿದ್ದರ ಬೆಟ್ಟದದಲ್ಲಿ ಪ್ರೇಮಿಗಳ ಬೆತ್ತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 4ನೇ ಅಧಿಕ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಎನ್ ಲಾವಣ್ಯ ಲತಾ ಅವರು ತ್ವರಿತವಾಗಿ ವಿಚಾರಣೆಯಾಗಿ ಆರೋಪಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 52 ಸಾವಿರ ದಂಡ ವಿಧಿಸಿ ಗುರುವಾರ ತೀರ್ಪು ನೀಡಿದ್ದಾರೆ.
ಕೊರಟಗೆರೆಯ ಪೋಲೀಸ್ ಠಾಣೆಯ ಪಿಐ ಮುನಿರಾಜು ಪ್ರಕರಣ ದಾಖಾಲಿಸಿ ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು ಸರಕಾರಿ ಅಭಿಯೋಜಕ ಜಿ.ಟಿ.ರಂಗಪ್ಪ ವಾದ ಮಂಡಿಸಿದ್ದರು.
Next Story





