‘ವರ್ಣಭೇದ ನೀತಿ’ಯ ಇಸ್ರೇಲ್ ವರದಿಗೆ ವಿಶ್ವಸಂಸ್ಥೆಯ ಅಧಿಕಾರಿ ರಾಜೀನಾಮೆ

ಬೆರೂತ್, ಮಾ. 18: ಇಸ್ರೇಲನ್ನು ‘ವರ್ಣಭೇದ ನೀತಿ ಅನುಸರಿಸುವ ಸರಕಾರ’ ಎಂಬುದಾಗಿ ತನ್ನ ವರದಿಯೊಂದರಲ್ಲಿ ಟೀಕಿಸಿದ್ದ ಜೋರ್ಡಾನ್‌ನ ವಿಶ್ವಸಂಸ್ಥೆ ಅಧಿಕಾರಿ ರೈಮಾ ಖಲಾಫ್ ಶುಕ್ರವಾರ ತನ್ನ ರಾಜೀನಾಮೆಯನ್ನು ಘೋಷಿಸಿದ್ದಾರೆ.
‘‘ವರದಿಯನ್ನು ವಾಪಸ್ ಪಡೆಯುವಂತೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ನನಗೆ ನಿನ್ನೆ ಬೆಳಗ್ಗೆ ಸೂಚಿಸಿದ್ದಾರೆ. ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಾನು ಅವರನ್ನು ಕೇಳಿಕೊಂಡಿದ್ದೇನೆ.
ಆದರೆ, ಅವರು ತನ್ನ ನಿರ್ಧಾರಕ್ಕೆ ಅಂಟಿಕೊಂಡಿದ್ದಾರೆ. ಹಾಗಾಗಿ, ನಾನು ವಿಶ್ವಸಂಸ್ಥೆಯ ನನ್ನ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ’’ ಎಂದು ವಿಶ್ವಸಂಸ್ಥೆಯ ಪಶ್ಚಿಮ ಏಶ್ಯಕ್ಕಾಗಿನ ಆರ್ಥಿಕ ಮತ್ತು ಸಾಮಾಜಿ ಆಯೋಗದ ಅಧೀನ ಮಹಾಕಾರ್ಯದರ್ಶಿ ಹಾಗೂ ಕಾರ್ಯಕಾರಿ ಕಾರ್ಯದರ್ಶಿ ಖಲಾಫ್ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.
Next Story





