Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕರ್ನಾಟಕ ಬಜೆಟ್-2017: ಮಹಿಳಾ...

ಕರ್ನಾಟಕ ಬಜೆಟ್-2017: ಮಹಿಳಾ ವಿರೋಧಿಯಂತೂ ಅಲ್ಲ, ಮಹಿಳಾ ಪ್ರೋತ್ಸಾಹಿ ಬಜೆಟ್

ಸರೋಜಾ ರಾಘವೇಂದ್ರಸರೋಜಾ ರಾಘವೇಂದ್ರ18 March 2017 10:02 PM IST
share
ಕರ್ನಾಟಕ ಬಜೆಟ್-2017: ಮಹಿಳಾ ವಿರೋಧಿಯಂತೂ ಅಲ್ಲ, ಮಹಿಳಾ ಪ್ರೋತ್ಸಾಹಿ ಬಜೆಟ್

ಮುಖ್ಯಮಂತ್ರಿಗಳು ಬಜೆಟ್ ಮಂಡಿಸುವ ಪೂರ್ವದಲ್ಲಿ ಹಲವು ಇಲಾಖಾ ಮುಖ್ಯಸ್ಥರು ಮತ್ತು ಹಲವು ಸಂಘಟನೆಗಳೊಂದಿಗೆ ಬಜೆಟ್  ಬಗ್ಗೆ  ಚರ್ಚಿಸಿದರು. ಆದರೆ, ಯಾವುದೆ ಮಹಿಳಾ ಸಂಘಟನೆ, ಪ್ರಗತಿಪರ ಮಹಿಳಾ ಮುಖಂಡರುಗಳ ಜೊತೆ ಚರ್ಚಿಸಲಿಲ್ಲ. ಮಹಿಳೆಯರ ತಲಸ್ಪರ್ಶಿ ಸಮಸ್ಯೆಗಳ ಒಳನೋಟಗಳಿಗಾಗಿ ಚರ್ಚೆಯಾಗಬೇಕಿತ್ತು. 

ಪುರುಷನ ಸಹಜೀವಿಯಾದ ಮಹಿಳೆ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯನ್ನು ಅವಳ ಶ್ರಮ, ಶಕ್ತಿ ಸಾಮರ್ಥ್ಯ, ಪ್ರತಿಭೆ ತನ್ನ ಮೊದಲ ಆದ್ಯತೆಯಾಗೆ ಪ್ರಪಂಚದ ಯಾವ ಪುರುಷರೂ ಸಮಾಜವೂ ನೋಡಿದ ಪರಿಗಣಿಸಿದ ದೃಷ್ಟಾಂತಗಳು ನಮ್ಮ ಮುಂದಿಲ್ಲ. ಸಿದ್ಧರಾಮಯ್ಯನವರು ಇದಕ್ಕೆ ಹೊರತಾಗಿಲ್ಲ. ಹೆಣ್ಣಿಗೆ ಯಾವಾಗಲೂ ೨ನೇ ಸ್ಥಾನ ಅಂತೆಯೇ ತಮ್ಮ ಬಜೆಟ್ ನಲ್ಲಿ ಮಹಿಳೆಯ ಮೂಲ ಸಮಸ್ಯೆಗಳಿಗೆ ಅವಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಯಾವುದೆ ಹೊಸ ಯೋಜನೆಗಳು ಮೂಡಿ ಬಂದಿಲ್ಲ. ಪೂರ್ವದಲ್ಲಿದ್ದ ಯೋಜನೆಗಳನ್ನೆ ನವೀಕರಿಸಿದ್ದಾರೆ ಬೆಂಬಲಿಸಿದ್ದಾರೆ ಎನ್ನಬಹುದು.

ಸ್ತ್ರೀ ಶಕ್ತಿ ಸಂಘಗಳಿಗೆ ಬಡ್ಡಿರಹಿತ ಸಾಲ ನೀಡಿಕೆ, ಆಶಾಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತರ ಮತ್ತು ಸಹಾಯಕಿಯರಿಗೆ ವೇತನ ಹೆಚ್ಚಳ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಪ್ರತ್ಯೇಕ ಚಿಕಿತ್ಸಾ ಘಟಕ, ವಿದ್ಯಾರ್ಥಿನಿಯರಿಗೆ ಚೂಡಿದಾರ್,ವಿದ್ಯಾರ್ಥಿನಿಯರ ಒಟ್ಟು ದಾಖಲಾತಿ ಪ್ರಮಾಣ ಹೆಚ್ಚಿಸಲು ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 23 ಮಹಿಳಾ ಹಾಸ್ಟೇಲ್  ನಿರ್ಮಾಣ,16,500 ಕಿರಿಯ ಮಹಿಳಾ ಸಹಾಯಕಿಯರಿಗೆ ತಾಯಿ ಮತ್ತು ಮಗುವಿನ ಅನುಸರಣಾ ವ್ಯವಸ್ಥೆಯಡಿ ಕಂಪ್ಯೂಟರ್ ಟ್ಯಾಬ್  ವಿತರಣೆ, ರಾಜ್ಯದ ಎಲ್ಲ ಜಿಲ್ಲೆಗಳಿಗೂ ಮಾತೃಪೂರ್ಣ ಯೋಜನೆ ವಿಸ್ತರಣೆ, ಸ್ತ್ರೀ ಶಕ್ತಿ ಒಕ್ಕೂಟಗಳ ಮೂಲಕ30 ಜಿಲ್ಲೆಗಳಲ್ಲಿ ಸವಿರುಚಿ ಸಂಚಾರಿ ಕ್ಯಾಂಟಿನ್  ಪ್ರಾರಂಭ ಮಾಡಲಾಗುದು ಎಂದು ಹೇಳಿದ್ದಾರೆ.

ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ವಿಧವೆಯರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು 10 ಸಾವಿರ ರೂ. ಸಹಾಯಧನ, 4% ಬಡ್ಡಿದರದಲ್ಲಿ 30ಸಾವಿರ ಸಾಲವನ್ನೊಳಗೊಂಡ ಆರ್ಥಿಕ ನೆರವು, ಬೆಂಗಳೂರು ಹಾಗುಮಹಾನಗರ ಪಾಲಿಕೆ ವ್ಯಾಪ್ತಿ ಗಳಲ್ಲಿ ದುಡಿಯುವ ಮಹಿಳೆಯರಿಗಾಗಿ 2 ಕೋಟಿ ರೂ. ವೆಚ್ಚದಲ್ಲಿ 10 ಮಹಿಳಾ ವಸತಿ ನಿಲಯಗಳ ಪ್ರಾರಂಭ, ಮಹಿಳಾ ಅಥ್ಲೆಟ್ ಗಳಿಗಾಗಿ ಪ್ರತ್ಯೇಕ ಸುಸಜ್ಜಿತ ಕ್ರೀಡಾ ನಿಲಯಗಳ ಸೌಲಭ್ಯ, ಮಹಿಳಾ ಉದ್ಯಮಿಗಳಿಗೆ 4%ರ ದರದಲ್ಲಿ ನೀಡುತ್ತಿರುವ ಸಾಲದ ಮಿತಿ 50ಲಕ್ಷದಿಂದ 2 ಕೋಟಿಗೆ ಏರಿಕೆ ಮತ್ತು ಪ್ರತ್ಯೇಕ business incubator ಸ್ಥಾಪನೆ ಹೀಗೆ ಹತ್ತುಹಲವು ಯೋಜನೆಗಳನ್ನು ಘೋಷಿದ್ದಾರೆ.

ಸಮಾಜವಾದದ ಹಿನ್ನಲೆಯ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಮುಖ್ಯಮಂತ್ರಿಗಳು ಅಧಿಕಾರ ವಹಿಸಿಕೊಂಡ ಆರಂಭದಲ್ಲೆ ಘೋಷಿಸಿದ ಅನ್ನಭಾಗ್ಯ ಯೋಜನೆ ನಿಜಕ್ಕೂ ಶ್ಲಾಘನೀಯ. ಬೆಳಗಾದೊಡನೆ ಏನು ಮಾಡುವುದು ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳತ್ತಿದ್ದ ಎಷ್ಟೋ ಬಡಮಹಿಳೆಯರ ತಲೆಭಾರವನ್ನು ಕಡಿಮೆ ಮಾಡಿದೆ.

ಬಹುಮುಖ್ಯವಾಗಿ ಮುಖ್ಯಮಂತ್ರಿಗಳು ಮಾಡಬೇಕಾಗಿದ್ದುದು ಮಧ್ಯಪಾನ ನಿಷೇಧ. ಬಹುಪಾಲು ಬಡಕುಟುಂಬದ ಹೆಣ್ಣುಮಕ್ಕಳು ಗಂಡಂದಿರ ಕುಡಿತದ ವ್ಯಸನದಿಂದ ಜರ್ಜರಿತರಾಗಿದ್ದಾರೆ, ಗಂಡಸರು ಕುಡಿತಕ್ಕೆ ತಾವು ದುಡಿದ ಹಣವನ್ನಲ್ಲದೆ ಹೆಂಡತಿ ದುಡಿದ ಹಣವನ್ನು ಕಿತ್ತು ಕೊಳ್ಳುತ್ತಾರೆ. ಇದರಿಂದ ಪ್ರತಿನಿತ್ಯ ಮನೆಯಲ್ಲಿ ಜಗಳ ಹೊಡೆದಾಟ, ಹಿಂಸೆ. ಓದುವುದನ್ನು ಬಿಟ್ಟು ಹೆದರಿಕೆಯಿಂದ ಇದನ್ನು ನೋಡುತ್ತಾ ಕುಳಿತುಕೊಳ್ಳುವ ಮಕ್ಕಳು.

ಗ್ರಾಮಗಳಲ್ಲಿ ಸರಕಾರಿ ಶಾಲೆಗಳಿವೆ.  ಅವುಗಳಲ್ಲಿ 1ನೇ ತರಗತಿಯಿಂದ ಇಂಗ್ಲೀಷ್ ಕಲಿಕೆ ಇದ್ದರೂ, ಶಿಕ್ಷಕರು, ಪಾಲಕರ ನಿರಾಸಕ್ತಿಯಿಂದಾಗಿ ಮಕ್ಕಳು 4ನೇ ತರಗತಿ ದಾಟಿದರೂ ಇಂಗ್ಲೀಷಿನ ಪದಗಳನ್ನು ಓದಲು ಮಕ್ಕಳಿಗೆ ಬರುವುದಿಲ್ಲ. ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬಹುದಿತ್ತು.

ಹೆಣ್ಣು ಭ್ರೂಣಹತ್ಯೆ ಎಗ್ಗಿಲ್ಲದೆ ನಡೆಯುತ್ತಿದೆ. ಬಡಹೆಣ್ಣುಮಕ್ಕಳ ಅಪೌಷ್ಟಿಕತೆ ಬಗ್ಗೆ ಇನ್ನು ವಿಸ್ತೃತ ಯೋಜನೆ ರೂಪಿಸಬಹುದಿತ್ತು. 18 ವರ್ಷದೊಳಗಿನ ಬಾಲಕಿಯರು ತಾಯಿಯಾಗುವ ಸಂದರ್ಭವಿದೆ. ಈ ಸಂದರ್ಭದಲ್ಲಿ ತಾಯಿ ಮಗು ಸಾವಿಗೀಡಾಗುವ ಸಂಭವವಿದೆ.  ಈ ಬಗ್ಗೆ ಮತ್ತು ದೌರ್ಜನ್ಯ ಅತ್ಯಾಚಾರದಂತಹ ಸಮಸ್ಯೆಗಳ ಕಾರಣ. ಮತ್ತು ತಡೆಗಾಗಿ ಸಮಿತಿ ಅಥವಾ ಆಯೋಗವನ್ನು ರಚಿಸಬಹುದಿತ್ತು.

ಮಹಿಳಾ ಕೃಷಿ ಕಾರ್ಮಿಕರು ಮತ್ತು ವಿವಿಧೆಡೆ ದುಡಿಯುತ್ತಿರುವ ಮಹಿಳೆಯರಿಗೆ ಯಾವುದೇ ಯೋಜನೆಗಳಿಲ್ಲ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಿದರು. ಆದರೆ ಬಿಸಿಯೂಟ ಕಾರ್ಯಕರ್ತೆಯರಿಗೆ? ಇನ್ನು ಹೆಣ್ಣುಮಕ್ಕಳ ಕಳ್ಳಸಾಗಣಿಕೆ,ವೇಶ್ಯಾವಾಟಿಕೆ, ಬಾಲ್ಯವಿವಾಹ, ಅನಕ್ಷರತೆ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬಹುದಿತ್ತು. ಒಟ್ಟಾರೆ ಈ ಬಾರಿಯ ಬಜೆಟ್ ಮಹಿಳಾ ವಿರೋಧಿಯಂತೂ ಅಲ್ಲ, ಮಹಿಳಾ ಪ್ರೋತ್ಸಾಹಿ ಬಜೆಟ್ ಎನ್ನಬಹುದು.

- ಸರೋಜಾ ರಾಘವೇಂದ್ರ, ಉಪನ್ಯಾಸಕಿ ಸಾಗರ

share
ಸರೋಜಾ ರಾಘವೇಂದ್ರ
ಸರೋಜಾ ರಾಘವೇಂದ್ರ
Next Story
X