ಕಳ್ಳಭಟ್ಟಿ ದಾಳಿ: ಓರ್ವನ ಬಂಧನ
ಮೂಡಿಗೆರೆ, ಮಾ.18: ತಾಲೂಕಿನ ಕೆಸವೊಳಲು ಗ್ರಾಮದಲ್ಲಿ ಕಳ್ಳಭಟ್ಟಿ ತಯಾರಿಕೆ ಮಾಡುತ್ತಿದ್ದ ಅಡ್ಡೆಗೆ ಅಬಕಾರಿ ಪೊಲೀಸರು ಶನಿವಾರ ದಾಳಿ ನಡೆಸಿ ಓರ್ವನನ್ನು ಬಂದಿಸಿ 80 ಲೀಟರ್ ಬೆಲ್ಲದ ಕೊಳೆಯನ್ನು ವಶಪಡಿಸಿಕೊಂಡಿದ್ದಾರೆ.
ಕೆಸಮೊಳಲು ಗ್ರಾಮದಲ್ಲಿ ಕಳ್ಳಭಟ್ಟಿ ತಯಾರಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಪೊಲೀಸರು ಕಳ್ಳಭಟ್ಟಿ ಘಟಕಕ್ಕೆ ದಾಳಿ ನಡೆಸಿ ಆರೋಪಿ ಕೌಶಿಕ್ (30)ಎಂಬಾತನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಆನಂದ್, ಉಪಾಧೀಕ್ಷಕ ಸಂತೋಷ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
Next Story





