ಭಟ್ಕಳ: ಅಪರಿಚಿತ ಶವ ಪತ್ತೆ
ಭಟ್ಕಳ: ಇಲ್ಲಿನ ರೈಲು ನಿಲ್ದಾಣದ ಬಳಿ ಹೊಳೆಯೊಂದರಲ್ಲಿ ಶನಿವಾರ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.
ಹೊಳೆಯಲ್ಲಿ ಮೃತದೇಹ ತೇಲಾಡುವ ಸ್ಥಿತಿಯಲ್ಲಿ ಕಂಡ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಮೃತರ ಉಡುಪು ಹಾಗೂ ನಗದು ಹಣ ದೊರಕಿದ್ದು, ಬೇರೆಕಡೆಯಿಂದ ಭಟ್ಕಳದಲ್ಲಿ ಭಿಕ್ಷಾಟನೆಗಾಗಿ ಬಂದಿರುವ ವ್ಯಕ್ತಿ ಸ್ನಾನಕ್ಕೆ ಇಳಿದಾಗ ಸಾವು ಸಂಭವಿಸಿರಬಹುದು ಎಂದು ಶಂಕಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





