ಲೈಂಗಿಕ ಕಿರುಕುಳವನ್ನು ಆಕ್ಷೇಪಿಸಿದ ಸಂತ್ರಸ್ತರಿಗೆ ಹಲ್ಲೆ
ಮುಝಫ್ಫರ್‌ನಗರ,ಮಾ.18: ಯುವಕರ ಗುಂಪೊಂದರಿಂದ ಕೆಲವು ಬಾಲಕಿಯರಿಗೆ ಲೈಂಗಿಕ ಕಿರುಕುಳವನ್ನು ಆಕ್ಷೇಪಿಸಿದ ತಪ್ಪಿಗೆ ಇಬ್ಬರು ಮಹಿಳೆಯರು ಸೇರಿದಂತೆ ಮುಝಫ್ಫರ್‌ನಗರ ಕೋಮುಗಲಭೆಯ ಆರು ಸಂತ್ರಸ್ತರ ಮೇಲೆ ಹಲ್ಲೆ ನಡೆಸಿ,ಅವರ ತ್ತ ಕಲ್ಲುತೂರಾಟ ನಡೆಸಿದ ಘಟನೆ ಜಿಲ್ಲೆಯ ಪಲ್ದಾ ಗ್ರಾಮದಲ್ಲಿ ಸಂಭವಿಸಿದೆ. 12 ಜನರ ವಿರುದ್ಧ ದೂರನ್ನು ದಾಖಲಿಸಿಕೊಳ್ಳಲಾಗಿದ್ದು, ಅವರ ಪೈಕಿ ಇಬ್ಬರನ್ನು ಗುಲಾಬ್ ಮತ್ತು ನಯೀಮ್ ಎಂದು ಗುರುತಿಸಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಇಂದಿಲ್ಲಿ ತಿಳಿಸಿದರು.
2013ರ ಕೋಮುಗಲಭೆಯ ಸಂತ್ರಸ್ತರಿಗೆ ಪಲ್ದಾ ಗ್ರಾಮದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಇಲ್ಲಿಯ ಕೆಲವು ಬಾಲಕಿಯರಿಗೆ ಯುವಕರ ಗುಂಪು ಲೈಂಗಿಕ ಕಿರುಕುಳ ನೀಡುತ್ತಿದೆ ಮತ್ತು ಇದನ್ನು ಪ್ರಶ್ನಿಸಿದ್ದಕ್ಕಾಗಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಇಕ್ಬಾಲ್ ಎನ್ನುವವರು ದೂರಿನಲ್ಲಿ ಆರೋಪಿಸಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story





