ಸಿಟಿ ಸೆಂಟರ್‌ನಲ್ಲಿ ‘ಕ್ಲೋತ್ ಬ್ಯಾಂಕ್’ ಪೆಟ್ಟಿಗೆ ಉದ್ಘಾಟನೆ

ಮಂಗಳೂರು, ಮಾ. 18: ಬ್ಯಾರಿ ನಿಖಾಹ್ ಹೆಲ್ಪ್ಲೈನ್ ವತಿಯಿಂದ ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿ ಅಳವಡಿಸಲಾಗಿರುವ ‘ಕ್ಲೋತ್ ಬ್ಯಾಂಕ್’ ಪೆಟ್ಟಿಗೆ ಉದ್ಘಾಟನೆ ಶನಿವಾರ ನೆರವೇರಿತು.
ಮೊಹ್ತೆಶಾಂ ಕಾಂಪ್ಲೆಕ್ಸೆಸ್ ಪ್ರೈ.ಲಿ.ನ ನಿರ್ದೇಶಕ ಎಸ್.ಎಂ.ಸವೂದ್ ಕ್ಲೋತ್ ಬ್ಯಾಂಕ್ ಪೆಟ್ಟಿಗೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹ್ಯೂಮನ್ ಕೈಂಡ್ ವೆಲ್ಫೇರ್ ಫೌಂಡೇಶನ್‌ನ ಕಾರ್ಯದರ್ಶಿ ಅಕ್ರಮ್, ಬ್ಯಾರಿ ನಿಖಾಹ್ ಹೆಲ್ಪ್ಲೈನ್‌ನ ಕಾರ್ಯದರ್ಶಿ ಮುಹಮ್ಮದ್ ಸುಹೈಲ್ ತೊಕ್ಕೊಟ್ಟು, ಆರಿಫ್, ಅಬ್ದುಲ್ ಮಜೀದ್ ಬಿಕರ್ನಕಟ್ಟೆ, ಸಿಟಿ ಸೆಂಟರ್‌ನ ಮ್ಯಾನೇಜರ್ ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.
ಈ ಯೋಜನೆಯು ಕಾರ್ಯರೂಪಕ್ಕೆ ತರುವಲ್ಲಿ ಬೆಂಬಲ ನೀಡಿ ಸಹಕರಿಸಿದ ಅಹ್ಮದ್ ಬಾವ ದುಬೈ ಹಾಗೂ ಫತಹುಲ್ಲಾ ಸಾಹೇಬ್ ಅಬುಧಾಬಿ ಇವರನ್ನು ಸ್ಮರಿಸಲಾಯಿತು.
ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದ ವಧು-ವರರಿಗೆ ಮದುವೆ ಉಡುಪುಗಳನ್ನು ದಾನಿಗಳಿಂದ ಸಂಗ್ರಹಿಸಿ ವಿತರಿಸುವ ಬ್ಯಾರಿ ನಿಖಾಹ್ ಹೆಲ್ಪ್ಲೈನ್‌ನನೂತನ ಯೋಜನೆ ‘ಕ್ಲೋತ್ ಬ್ಯಾಂಕ್’ನಡಿ ಈ ಬಾಕ್ಸ್ ಅಳವಡಿಸಲಾಗಿದೆ





