ಕಾರ್ತಿಕ್‌ರಾಜ್ ಹತ್ಯೆ ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಕೊಣಾಜೆಯಲ್ಲಿ ಧರಣಿ

ಕೊಣಾಜೆ, ಮಾ.19: ಕಾರ್ತಿಕ್‌ರಾಜ್ ಹತ್ಯೆ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಹಿಂದೂ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಕೊಣಾಜೆ ಠಾಣೆಯೆದುರು ಇಂದು ಬೆಳಗ್ಗಿನಿಂದ ಧರಣಿ ಆರಂಭಗೊಂಡಿದೆ.
ಈ ವೇಳೆ ಸ್ಥಳೀಯ ಮುಖಂಡ ಪ್ರಕಾಶ್ ಶೆಟ್ಟಿ ಮಾತನಾಡಿ, ಕಾರ್ತಿಕ್‌ರಾಜ್ ಹತ್ಯೆ ಆರೋಪಿಗಳನ್ನು ಬಂಧಿಸಿದರೆ ಪೊಲೀಸರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು, ಸಂತೋಷ್ ಕುಮಾರ್ ರೈ, ಸತ್ಯಜಿತ್ ಸುರತ್ಕಲ್, ಜಯರಾಮ ಶೆಟ್ಟಿ ಮೊದಲಾದವರು ಧರಣಿಗೆ ನೇತೃತ್ವ ನೀಡಿದ್ದಾರೆ.
Next Story





