ನಜೀಬ್ ನಾಪತ್ತೆ, ಮುತ್ತುಕೃಷ್ಣ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆಗೆ ಎಸ್ಸೆಸ್ಸೆಫ್ ಆಗ್ರಹ

ಹೊಸದಿಲ್ಲಿ, ಮಾ.19: ಇಲ್ಲಿನ ಪ್ರತಿಷ್ಠಿತ ಜವಾಹರ ಲಾಲ್ ನೆಹರೂ ವಿವಿಯ ಸಂಶೋಧನಾ ವಿದ್ಯಾರ್ಥಿಗಳಾದ ನಜೀಬ್ ಅಹ್ಮದ್ ನಾಪತ್ತೆ ಮತ್ತು ದಲಿತ ವಿದ್ಯಾರ್ಥಿ ಮುತ್ತುಕೃಷ್ಣ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆಗೆ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಆಗ್ರಹಿಸಿದೆ.
ನಜೀಬ್ ನಾಪತ್ತೆ, ವೇಮುಲಾ ಮತ್ತು ಮುತ್ತುಕೃಷ್ಣರ ಆತ್ಮಹತ್ಯೆ ಮೊದಲಾದ ಪ್ರಕರಣಗಳಿಂದ ಉನ್ನತ ಶಿಕ್ಷಣಾಲಯಗಳಲ್ಲಿ ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕಿರುಕುಳವಿರುವುದು ಸ್ಪಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಕಾಂಪಸ್‌ಗಳನ್ನು ಅಸಹನೆಯಿಂದ ಮುಕ್ತಗೊಳಿಸಬೇಕೆಂಬ ರಾಷ್ಟ್ರಪತಿಯವರ ಕರೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.
Next Story